Tuesday, October 27, 2009

ನೀ ನೆಡೆದ ದಾರಿಯಲ್ಲಿ

ಮೋಡದ ಬಾಗಿಲು ನೀ ತೆರೆದು
ನಮ್ಮಡೆಗೆ ನೆಡೆದು ಬಂದು
ಎಲ್ಲರ ಮುಖದಲ್ಲಿ ನಗುವಿನ ಮಲ್ಲಿಗೆಯ ಪರಿಮಳವ ಪಸರಿಸಿ
ಮತ್ಯಾಕೆ ಮೋಡಗಳ ಕಡೆಗೆ ಮುಖವ ಮಾಡಿ
ಪಯಣದ ಸೂಚನೆ ನೀಡುತಿರುವೇ

ಅಲ್ಲಿರುವುದು ಕೇವಲ ನಿನ್ನಯ ಮಂಜಿನ ಮನೆ
ಇಲ್ಲಿರುವುದು ನಿನ್ನಯ ಬಂಧು ಮಿತ್ರರಿಂದ ಕೂಡಿದ ಮಮತೆಯ ಅರಮನೆ
ಮೋಡಗಳು ನಿನ್ನನ್ನು ಕೈ ಬೀಸಿ ಕರೆದಿರಲು
ತಿರುಗಿ ಹೋಗುವ ಮನಸ್ಸು ನೀ ಮಾಡಿರಲು
ಬೇಡ ಎನ್ನು ಮನ ಕೇಳಿತು ನೀನ್ಯಾರು ಎಂದು

ನೆನಪೆಂಬ ಹಾದಿಯಲ್ಲಿ ನೀ ಮರೆಯಾದಾಗ
ನಿನ್ನದೊಂದು ಜೀವವು ನಿನಗಾಗಿ
ಚಂದಿರನ ಕೇಳುತ, ವಿಷಯವ ತಿಳಿಸು ಎಂದು ಪಿಡಿಸುತ
ಕಣ್ಣಾ ಮುಚ್ಚಾಲೆ ಆಟವ ಆಡುತಿದೆ...

ನಿಮ್ಮವ,
ರಾಘು.

6 comments:

ಮನಸು said...

tumbaaaa tumbaaa chennagide kavana

Raghu said...

thank you manasu...
ನಿಮ್ಮವ,
ರಾಘು.

ಜಲನಯನ said...

Raghu nice imagination getting proper words and flow..olleya kalpanege uttama abhibhaavada hodike..congrats

Raghu said...

Welcome to MounadaPadagalu. Imagination is always pulls lot of imaginings. Thank you very much Jalanayana. Keep reading it.ಪ್ರೋಸ್ಸಾಹ ಸದಾ ಇರಲಿ...
ನಿಮ್ಮವ,
ರಾಘು.

ಮನಮುಕ್ತಾ said...

ಪ್ರಯತ್ನ ಪ್ರಾವಿಣ್ಯವನ್ನು ತರುತ್ತದೆ. ಕವನ ಚೆನ್ನಾಗಿದೆ ಬರೆಯುತ್ತಿರಿ.

Raghu said...

ಮನಮುಕ್ತ,
ಸರಿಯಾದ ಮಾತು.. ಪ್ರಯತ್ನಪಟ್ಟರೆ ತಾನೆ ಏನಾದ್ರು ಆಗೋದು ಅಲ್ವ? ನಿಮ್ಮ ಪ್ರೋಸ್ಸಹ ಹೀಗೆ ಇರಲಿ...
ನಿಮ್ಮವ,
ರಾಘು.