Sunday, November 1, 2009

ನೋಟಿನ ಮಹಿಮೆ

ನೋಟು ನೋಟು ನೋಟು ಎಲ್ಲರಿಗು ಬೇಕು ನೋಟು
ಒದ್ದೆಯಾಗಿರಲಿ, ಅದು ಮುದ್ದೆಯಾಗಿರಲಿ ಇರಬೇಕು ಎಲ್ಲರ ಜೇಬಲ್ಲಿ ನೋಟು
ಕಂತೆ ಕಂತೆ ನೋಟುಗಳ ಸಂತೆ ನಾವಾಗಿದ್ದಲ್ಲಿ ಕೂಗಿ ಕರೆದು ಹಾಕುವರು ನಮಗೆ ಮಣೆ
ಇಲ್ಲದಿದ್ದರೆ ಕೊಡಲಾರರು ನಮಗೆ ಬೆಲೆ, ಜೊತೆಗೆ ನೆಲೆ
ನೋಟು ನೋಟು ನೋಟು ಎಲ್ಲರಿಗು ಬೇಕು ನೋಟು
ಒದ್ದೆಯಾಗಿರಲಿ, ಅದು ಮುದ್ದೆಯಾಗಿರಲಿ ಇರಬೇಕು ಎಲ್ಲರ ಜೇಬಲ್ಲಿ ನೋಟು...

ಗಾಂಧಿ ತಾತನನ್ನೇ ಮರೆತಿರುವ ಜನ ಮರೆಯರು
ಪ್ರತಿ ನೋಟಿನಲ್ಲಿ ತಾತನ ಹುಡುಕಲು
ಏಕೆಂದರೆ ಎಲ್ಲರಿಗೂ ತಿಳಿದಿರುವುದು ನೋಟಿನ ಅಂಕೆ ಸಂಖ್ಯೆ ಏನೇ ಆಗಿರಲಿ
ತಾತನಿಲ್ಲದ ನೋಟಿಗೆ ಜೀವವಿಲ್ಲ ಎಂದು
ನೋಟು ನೋಟು ನೋಟು ಎಲ್ಲರಿಗು ಬೇಕು ನೋಟು
ಒದ್ದೆಯಾಗಿರಲಿ, ಅದು ಮುದ್ದೆಯಾಗಿರಲಿ ಇರಬೇಕು ಎಲ್ಲರ ಜೇಬಲ್ಲಿ ನೋಟು...

ಪ್ರತಿ ಕೆಲಸದ ಹಿಂದೆ ನೋಟಿರಬೇಕು
ಅದು ಆಗಬೇಕಾದರೆ ಎಷ್ಟು ನೋಟಿರಬೇಕೋ ಅಸ್ಟಿರಬೇಕು.
ನೋಟಿನ ಮುಂದೆ ಯಾರು ಲೆಕ್ಕವೇ ಅಲ್ಲ
ಅದರ ಹಿಂದೆ ಯಾರು ಇಲ್ಲದವರಿಲ್ಲ
ನೋಟು ಇದ್ದರೆ ಆಸೆಗೆ ಮಿತಿಯೇ ಇಲ್ಲ, ಕನಸಿಗೆ ಕೊನೆಯೇ ಇಲ್ಲ,
ಜೀವಕೆ ಬೆಲೆಯೇ ಇಲ್ಲ, ಎನ್ನುವರು ಎಲ್ಲಾ
ನೋಟು ನೋಟು ನೋಟು ಎಲ್ಲರಿಗು ಬೇಕು ನೋಟು
ಒದ್ದೆಯಾಗಿರಲಿ, ಅದು ಮುದ್ದೆಯಾಗಿರಲಿ ಇರಬೇಕು ಎಲ್ಲರ ಜೇಬಲ್ಲಿ ನೋಟು...

ನಿಮ್ಮವ,
ರಾಘು.

15 comments:

Anonymous said...

ವೋಟಿಗು ಬೇಕು ನೋಟ್
:-)
ಮಾಲತಿ ಎಸ್.

Ittigecement said...

ನೋಟಿನ ಮಹಿಮೆ ಚೆನ್ನಾಗಿ ಹೇಳಿದ್ದೀರಿ...

ನೋಟಿದ್ದರೆ ವೋಟು...
ವೋಟಿಗಾಗಿ ನೋಟು....

ಚುಕ್ಕಿಚಿತ್ತಾರ said...

ನಿಮ್ಮ ಭಾವನೆ ಸತ್ಯ . ರಾಘು... ಅವರೇ. ನೋಟೇ ಎಲ್ಲಕ್ಕೂ ಬೇಕು. ಜೀವ ಇದ್ದಾಗಲೂ, ಜೀವ ಹೋದಾಗಲೂ, ಎಲ್ಲಿದ್ದರೂ, ಹೇಗಿದ್ದರೂ ನೋಟೇ ಜೀವನ.ನೋಟೇ ಪ್ರಪ೦ಚ. ಕವನ ಚೆನ್ನಾಗಿದೆ.

ಸವಿಗನಸು said...

ನೋಟಿನ ಮಹಿಮೆ ಸೊಗಸಾಗಿ ಹೇಳಿದ್ದೀರ...
ಕನ್ನಡ ರಾಜ್ಯೋತ್ಸವದ ಹಾರ್ಧಿಕ ಶುಭಾಷಯಗಳು...

Raghu said...

ಮಾಲತಿ,
:) ನೋಟು ಇಲ್ಲ ಅಂದ್ರೆ ಓಟು ಬಿಳೋಲ್ಲ, ಖುರ್ಚಿ ಸಿಗೋಲ್ಲ.
ಧನ್ಯವಾದಗಳು.ಕನ್ನಡ ರಾಜ್ಯೋತ್ಸವದ ಹಾರ್ಧಿಕ ಶುಭಾಷಯಗಳು.
ನಿಮ್ಮವ ,
ರಾಘು.

Raghu said...

ಪ್ರಕಾಶ್,
ಹ್ಹ ಹ್ಹ ಹ್ಹ...ಹೌದು ಮತ್ತೆ ನೋಟು ಇಲ್ಲಾಂದ್ರೆ ಜೀವನ ಹೇಗೆ?... :) ಕನ್ನಡ ರಾಜ್ಯೋತ್ಸವದ ಹಾರ್ಧಿಕ ಶುಭಾಷಯಗಳು.
ನಿಮ್ಮವ,
ರಾಘು.

ಶಿವಪ್ರಕಾಶ್ said...

ಹ್ಹಾ ಹ್ಹಾ ಹ್ಹಾ...
ಕಾಸಿದ್ದೊನೆ ಬಾಸು..
ಚನ್ನಾಗಿದೆ ನಿಮ್ಮ ಕವನ

Raghu said...

ವಿಜಯಶ್ರೀ,
ನೋಟಿನ ಪ್ರಪಂಚ. Super!.. ಧನ್ಯವಾದಗಳು. ಕನ್ನಡ ರಾಜ್ಯೋತ್ಸವದ ಹಾರ್ಧಿಕ ಶುಭಾಷಯಗಳು...
ನಿಮ್ಮವ,
ರಾಘು.

Raghu said...

ಸ್ನೇಹಜೀವಿಯವರಿಗೆ,
ಮೆಚ್ಚುಗೆಗೆ ಖುಷಿ ಆಯಿತು. ನಿಮಗೂ ಕನ್ನಡ ಹಬ್ಬದ ಶುಭಾಷಯಗಳು...
ರಾಘು.

Raghu said...

ಹ್ಹಾ ಹ್ಹಾ ಹ್ಹಾ...ಸರಿಯಾದ ಮಾತು...Thank you ಶಿವಪ್ರಕಾಶ್...
ರಾಘು.

ಮನಸು said...

ತುಂಬಾ ಚೆನ್ನಾಗಿದೆ ಕವನ, ದುಡ್ಡೇ ದೊಡ್ಡಪ್ಪ....

ಗೌತಮ್ ಹೆಗಡೆ said...

:) olleya kavana..

Raghu said...

ಮನಸು, ಗೌತಮ್ ಹೆಗಡೆ,
ಧನ್ಯವಾದಗಳು... :) ನೋಟಿಲ್ಲದೆ ಜೀವನ ಸಾಗಿಸೋದು ಕಷ್ಟಕರ.. ಆದರೆ ದುಡ್ಡೇ ಎಲ್ಲಾ ಅಲ್ಲ ಅಲ್ವ?..
ನಿಮ್ಮವ,
ರಾಘು.

ದಿನಕರ ಮೊಗೇರ said...

ರಾಘು,
ದುಡ್ಡೇ, ದುಡ್ಡು.... ಸಂಸಾರದಲ್ಲಿ ದುಡ್ಡು ಇಲ್ಲದಿದ್ದರೆ..... ಬರಿಯ ಡಾಟ್....... ಅಸ್ತೆ ಇರತ್ತೆ....ಇದನ್ನೇ ತಿಳಿಸುವ ನಿಮ್ಮ ಆಶಯ ಚೆನ್ನಾಗಿತ್ತು......

Raghu said...

ದಿನಕರ,
ಧನ್ಯವಾದಗಳು... :)
ರಾಘು.