Sunday, November 8, 2009

ಮಾತಿನ ಅಲೆ

ನಿನ್ನ ಭೇಟಿ ಮಾಡಲು ಸಿಗುವುದು ನೆಪಗಳು ನೂರಾರು
ನಿನ್ನ ಜೊತೆ ಮಾತನಾಡಲು ಸಿಗುವುದು ಪದಗಳು ಸಾವಿರಾರು
ನೀನಿರುವೆ ಹತ್ತಾರು ಮೈಲುಗಳ ಆಚೇ
ಆದರೂ ನನ್ನದೇಗೆ ತಿಳಿಯುವುದು ನೀನಾಡುವ ಪ್ರತಿಯೊಂದು ಮಾತು

ನಿನ್ನ ಭೇಟಿ ಮಾಡಲು ಸಿಗುವುದು ನೆಪಗಳು ನೂರಾರು
ನಿನ್ನ ಜೊತೆ ಮಾತನಾಡಲು ಸಿಗುವುದು ಪದಗಳು ಸಾವಿರಾರು

ಅಲೆ ಅಲೆಯಾಗಿ ಬಂದ ಪ್ರೀತಿಯ ಮಾತು
ಕರೆದೊಯ್ಯುವುದು ಕ್ಷಣದಲ್ಲಿ ನೀನಿರುವ ಊರಿನೆಡೆಗೆ
ಜೊತೆ ಜೊತೆಯಾಗಿ ಬಂದ ನಗು ಆರಳುವುದು
ಕ್ಷಣದಲ್ಲಿ ಎನ್ನಯ ಮೊಗದಲ್ಲಿ
ಒಂದೂಂದಾಗಿ ನೆನಪಾಗುವ ನೀನಾಡುವ ಮಾತುಗಳು
ಪದೇ ಪದೇ ನಾ ಹೇಳುತಿರುವೆ ನಾನಾಡುವ ಸಾವಿರ ಪದಗಳಲ್ಲಿ

ನಿನ್ನ ಭೇಟಿ ಮಾಡಲು ಸಿಗುವುದು ನೆಪಗಳು ನೂರಾರು
ನಿನ್ನ ಜೊತೆ ಮಾತನಾಡಲು ಸಿಗುವುದು ಪದಗಳು ಸಾವಿರಾರು

ನನ್ನಯ ಕನಸುಗಳು ಆರಿತಿರುವ ವಿಷಯಗಳು ನಿನ್ನಯ ಮನದಲ್ಲಿ
ಹೆಜ್ಜೆಯ ಅಚ್ಚು ಹಾಕಿ ಅಲ್ಲೇ ಮನೆಯ ಮಾಡಿದೆ
ಎಸ್ಟೋ ದಿನಗಳ ನಂತರ ಸನಿಹದಿಂದ ಕೇಳಿದ ನಿನ್ನಯ
ಮಧುರ ಮಾತಿನ ಕನಸು ಹೆಚ್ಚಿಸಿದೆನ್ನೆಯ ಮುಖದ ಕಾಂತಿಯ
ಕನಸಿನ ಮಹೋತ್ಸವದಲ್ಲಿ ಮಾತಿನ ಕಲರವವು ಮೆಲ್ಲನೆ ಗುನುಗುತಿದೆ ಕಿವಿಯೊಳಗೆ...

ನಿನ್ನ ಭೇಟಿ ಮಾಡಲು ಸಿಗುವುದು ನೆಪಗಳು ನೂರಾರು
ನಿನ್ನ ಜೊತೆ ಮಾತನಾಡಲು ಸಿಗುವುದು ಪದಗಳು ಸಾವಿರಾರು

ನಿಮ್ಮವ,
ರಾಘು.

15 comments:

ಜಲನಯನ said...

ನಿಮಗೆ ಮನಸಿಗೆ ಹತ್ತಿರ ಮತ್ತು ಬೇಕಾದವರ ಮನಕ್ಕೆ ಹತ್ತಿರವಾಗುವ ಪದಗಳ ಬಂಧ ನಿಮ್ಮ ಕವಿತೆಯನ್ನು ಸಾರ್ಥಕಗೊಳಿಸುತ್ತೆ...ಅವರ ಮನದಲ್ಲಿ ಉಳಿಯುತ್ತೆ...ಬಿಡಿ ಚಿಂತೆ ಬೇಡ...ರಘು ಪ್ರಯತ್ನ ಚನ್ನಾಗಿದೆ...ಇಲ್ಲಿ ಬೇಟಿ..ನೋ ಅಥವಾ ಭೇಟಿ ನೋ? ...ಬಹುಶಃ ಎರಡನೇದು...?!!

Snow White said...

ರಘು ಅವರೇ ,
ತುಂಬ ಚೆನ್ನಾಗಿದೆ ನಿಮ್ಮ ಕವನ ..ತುಂಬ ಇಷ್ಟವಾಯಿತು :)

ಚುಕ್ಕಿಚಿತ್ತಾರ said...

ಒಳ್ಳೆಯ ಪ್ರಯತ್ನ. ಮು೦ದುವರೆಸಿ.

Raghu said...

ಜಲನಯನ, ಹ್ಹ ಹ್ಹ ಹ್ಹ.. ಭೇಟಿ ಸರಿಯಾದ ಪದ...
ನಿಮ್ಮ ಪ್ರೋಸ್ಸಾಹ ಸದಾ ಇರಲಿ.. ಧನ್ಯವಾದಗಳು..

Snow White,
ರಾಘು 'ಅವರೇ'ನಲ್ಲಿ 'ಅವರೇ'ಯನ್ನ ಕಳೆದು ರಾಘು ಮಾತ್ರ ಇಡಿ.. :)
ನಿಮ್ಮ ಪ್ರೋಸ್ಸಾಹ ಸದಾ ಇರಲಿ.. ಧನ್ಯವಾದಗಳು..

ನಿಮ್ಮವ,
ರಾಘು.

Raghu said...

ಚುಕ್ಕಿಚಿತ್ತಾರ,
ಬೆನ್ನು ತಟ್ಟಿ ಪ್ರೋಸ್ಸಾಹಿಸಿದಕ್ಕೆ ಧನ್ಯವಾದಗಳು... :)
ನಿಮ್ಮವ,
ರಾಘು.

Anonymous said...

Nice poem da
:-)
malathi S

ಶಿವಪ್ರಕಾಶ್ said...

ರಘು ಅವರೇ ,
ಕವನ ತುಂಬಾ ಚೆನ್ನಾಗಿದೆ.

ಸವಿಗನಸು said...

ರಾಘು,
ತುಂಬಾ ಸೊಗಸಾಗಿದೆ ನಿಮ್ಮ ಕವನ ....
ಅಭಿನಂದನೆಗಳು...

ಸಾಗರದಾಚೆಯ ಇಂಚರ said...

ರಘು ಅವರೇ,
ಸುಂದರ ಕವನ
ಮಾತಿನ ಅಲೆಗಳು ಚೆನ್ನಾಗಿವೆ
ರಾಗಬದ್ದವಾಗಿವೆ

Creativity said...

ಬಹಳ ಸುಂದರವಾಗಿದೆ :) :)

ದಿನಕರ ಮೊಗೇರ said...

ರಘು ಅವರೇ,
ಕವನ ತುಂಬಾ ಚೆನ್ನಾಗಿದೆ.... ಅಂತೂ ನೆಪ ಹುಡುಕುವುದು ಬಿಟ್ಟು ಕವನದಿಂದ ಭೇಟಿ ಆಗ್ತಾ ಇದೀರಾ.... ಸುಪ್ಪರ್ ಸರ್...

Raghu said...

malathi S,
Thank you ri.. :)
Keep coming...

ಶಿವಪ್ರಕಾಶ್,
ದನ್ಯವಾದಗಳು...

ನಿಮ್ಮವ,
ರಾಘು.

Raghu said...

ಸವಿಗನಸು, ಸಾಗರದಾಚೆಯ ಇಂಚರ,
ನಿಮ್ಮ ಪ್ರೋಸ್ಸಾಹಕ್ಕೆ ನಾನು ಸದಾ ಚಿರಋಣಿ... ದನ್ಯವಾದಗಳು...
ನಿಮ್ಮವ,
ರಾಘು.

Raghu said...

ಸಹನಾ ಅವರೇ,
ಮೌನದ ಪದಗಳ ಬ್ಲಾಗಿಗೆ ಸ್ವಾಗತ. ದನ್ಯವಾದಗಳು... ಬರ್ತಾನೆ ಇರಿ.. :)
ನಿಮ್ಮವ,
ರಾಘು.

Raghu said...

ದಿನಕರ ಅವರೇ,
ಧನ್ಯವಾದಗಳು... ಹ್ಹಹ್ಹಹ್ಹ... ಹೌದೌದು... :)
ನಿಮ್ಮವ,
ರಾಘು.