Sunday, June 27, 2010

ಏನಾಗಿದೆ.. ಈ ಮನಸಿಗೆ..

ಏನಾಗಿದೆ..ಈ ಹಾಡಿಗೆ, ಏನಾಗಿದೆ..ಈ ಮನಸಿಗೆ,
ಏನಾಗಿದೆ..ಈ ಜೀವಕೆ, ಏನಾಗಿದೆ..ಈ ಭಾವಕೆ,
ಮರೆಯದ ನೆನಪಿಗೆ..ಸೋತಿದೆ ಜೀವ,
ಅರಳದ ಕನಸಿಗೆ..ನೊಂದಿದೆ ಭಾವ.

ಏನಾಗಿದೆ..ಈ ಹಾಡಿಗೆ, ಏನಾಗಿದೆ..ಈ ಮನಸಿಗೆ,
ಏನಾಗಿದೆ..ಈ ಜೀವಕೆ, ಏನಾಗಿದೆ..ಈ ಭಾವಕೆ.

ಕಣ್ಣ ತುಂಬೆಲ್ಲವೂ ನಿನ್ನ ನೆನಪೇಕಿದೆ,
ಎದೆಯ ಒಳಗೆಲ್ಲವೂ ನಿನ್ನ ನಗು ಕೂತಿದೆ,
ಉಸಿರ ಕಣಕಣದಲ್ಲಿಯೂ ನಿನ್ನ ಹೂ ಬೆಳಕಿದೆ,
ಯಾಕೆ ಹೀಗೆ, ಇಂದು ಈ ಮನಸೇ ಹಾಗೇ..

ಏನಾಗಿದೆ..ಈ ಹಾಡಿಗೆ, ಏನಾಗಿದೆ..ಈ ಮನಸಿಗೆ,
ಏನಾಗಿದೆ..ಈ ಜೀವಕೆ, ಏನಾಗಿದೆ..ಈ ಭಾವಕೆ.

ಮಾತಿಗೆ ನಿನ್ನ ಜೊತೆಯೇ ಇಲ್ಲ, ಮೌನಕೆ ಜಗವೇ ಎಲ್ಲಾ,
ಕಳೆಯಲು ದಿನಗಳೇ ಇಲ್ಲ, ಆಸೆಗೆ ಜಾಗವೇ ಇಲ್ಲ,
ಯಾಕೆ ಹೀಗೆ, ಇಂದು ಈ ನೆನಪೇ ಹಾಗೇ..
ಹಗಲು..ಇಳಿಯುತ್ತಿದೆಯೋ,
ನೋವು..ನಗುವಾಗಿದೆಯೋ,
ಉಳಿಸೇ ಈ ಜೀವ, ಮರೆಸೇ ಈ ನೋವ..

ಏನಾಗಿದೆ..ಈ ಹಾಡಿಗೆ, ಏನಾಗಿದೆ..ಈ ಮನಸಿಗೆ,
ಏನಾಗಿದೆ..ಈ ಜೀವಕೆ, ಏನಾಗಿದೆ..ಈ ಭಾವಕೆ,
ಮರೆಯದ ನೆನಪಿಗೆ..ಸೋತಿದೆ ಜೀವ
ಅರಳದ ಕನಸಿಗೆ..ನೊಂದಿದೆ ಭಾವ.

ನಿಮ್ಮವ,
ರಾಘು.

33 comments:

ಚುಕ್ಕಿಚಿತ್ತಾರ said...

nice poem..

Nagi said...

Nice one sir

ಮನಸು said...

tumba chennagide.... manasigenagide endu koorabedi happy agi iri...hahah

Subrahmanya said...

ಸುಂದರ ಕವನ.

ಸಾಗರದಾಚೆಯ ಇಂಚರ said...

wonderful Raghu Sir
sakattagide

Shashi jois said...

ಕವನ ಚೆನ್ನಾಗಿದೆ..

ಸಾಗರಿ.. said...

ವಿರಹಿಯ ಕೊರಗಿನ ಕವನ ತುಂಬಾ ಹಿಡಿಸಿತು

ಅನಂತ್ ರಾಜ್ said...

ರಾಘು...ವಿರಹ ಭಾವ ಚೆನ್ನಾಗಿ ಮೂಡಿಸಿದ್ದೀರಿ...
ಏನಾಗಿದೆ..ಏಕಷ್ಟು ವಿರಹ ಭಾವ..!!!

ಅನ೦ತ್

Ranjita said...

ನೆನಪಿನ ಕವನ !!! ... ಸೂಪರ್

© ಹರೀಶ್ said...

nice

ಪ್ರವೀಣ್ ಭಟ್ said...

Hi Raghu..

olle sangeetha sikkidre super agi hadabahudu.. very nice one . nice feelings

pravi

ಶಿವಪ್ರಕಾಶ್ said...

nice one raghu...

sunaath said...

ವಿರಹದ ನೋವು ಕವನದಲ್ಲಿ ಗಾಢವಾಗಿ ವ್ಯಕ್ತವಾಗುತ್ತಿದೆ.
ಆದರೆ ವಿರಹ ಯಾಕೆ?

ಮನದಾಳದಿಂದ............ said...

ಚನ್ನಾಗಿದೆ ಸರ್,
ಸುಂದರ ಕವನ........

ತೇಜಸ್ವಿನಿ ಹೆಗಡೆ said...

good one.

Snow White said...

sundaravada saalugalu :)

ಜಲನಯನ said...

ಏನಾಗಿದೆ..? ಎನ್ನುವುದರಲ್ಲೇ ಎಲ್ಲಾ ಆಗಿದೆ ಆದರೆ ಏಕಾಗಿದೆ ಎಂದು ತಿಳಿಯದಾಗಿದೆ ಎನ್ನುವುದನ್ನ ಬಿಂಬಿಸಿದ್ದೀರಿ ರಾಘು...ಚನ್ನಾಗಿದೆ..ಇದೇ ಆಗಿದೆ....ಹಹಹ

Raghu said...

ವಿಜಯಶ್ರೀ ಮತ್ತು nagi ಅವರೇ ತುಂಬಾ ತುಂಬಾ ಧನ್ಯವಾದಗಳು...
ಮನಸು ಮೇಡಂ..ಮನಸು ಯಾವಾಗಲು ಹ್ಯಾಪಿ..ನಗೋದೇ ನನ್ನ ಕೆಲಸ..ಧನ್ಯವಾದಗಳು...
ಸೀತಾರಾಮ್ ಸರ್, ಸುಬ್ರಮಣ್ಯ ಅವರೇ..ಮತ್ತು ಗುರು ಅವರೇ..ಧನ್ಯವಾದಗಳು...
ನಿಮ್ಮವ,
ರಾಘು.

Raghu said...

ಶಶಿ ಮೇಡಂ, ಸಾಗರಿ ಅವರೇ..ತುಂಬಾ ಥ್ಯಾಂಕ್ಸ್..
ಆನಂತ್ ಸರ್..ವಿರಹದ ಭಾವನೆ ಹೇಳೋದು ತುಂಬಾನೇ ಕಷ್ಟ..ಇದು ಒಂದು ಸಣ್ಣ ಪ್ರಯತ್ನ..ಧನ್ಯವಾದಗಳು..
ರಂಜಿತ ಅವರೇ, ಹರೀಶ್, ಕವನ ಮೆಚ್ಚಿದಕ್ಕೆ..ತುಂಬಾ ಥ್ಯಾಂಕ್ಸ್..
ನಿಮ್ಮವ,
ರಾಘು.

Raghu said...

ಪ್ರವಿ..ಸಂಗೀತ..ರಾಗ..ಒಂದು ಹಾಡಿಗೆ ತುಂಬಾನೇ ಮುಖ್ಯ..
ಕವನ ಇಷ್ಟ ಆಗಿದಕ್ಕೆ ಖುಷಿ ಆಯಿತು.
ಧನ್ಯವಾದಗಳು...
ಶಿವಪ್ರಕಾಶ್..ತುಂಬಾ ಥ್ಯಾಂಕ್ಸ್..
ಸುನಾತ್..ಹೀಗೆ ಏನಾದ್ರು ಬೇರೆ ತರ ಬರಿಯುವ ಅಂತ..ಅದರ ಪ್ರಯತ್ನನೆ ಇದು.ಧನ್ಯವಾದಗಳು...
ನಿಮ್ಮವ,
ರಾಘು.

Raghu said...

ಮನದಾಳದಿಂದ.. ತೇಜಸ್ವಿನಿ ಮೇಡಂ..ನೆನಪು ಮೇಡಂ..ವಸಂತ್... ಧನ್ಯವಾದಗಳು..
ಆಜಾದ್ ಸರ್...
ಏಕಾಗಿದೆ ಎಂದು ತಿಳಿಯದಾಗಿದೆ..ಆದದ್ದು ಆಗಿಯಾಗಿದೆ..ಏನು ಮಾಡೋಕ್ಕಾಗಲ್ಲ.. ಹ್ಹ ಹ್ಹ ಹ್ಹ..
ನೈಸ್ ಕಾಮೆಂಟ್...
ಧನ್ಯವಾದಗಳು..
ನಿಮ್ಮವ,
ರಾಘು.

Kanthi said...

Hi Raghu, nice poems. I didn't know that u are such a good poet.All poems are really nice. Keep it up :-)

shridhar said...

ರ‍ಾಘು ..
ಕವನ ಚೆನ್ನಾಗಿದೆ .. ವಿರಹ ಹೀಗೆಕಾಗಿದೆ ....!!!!

nenapina sanchy inda said...

Many happy returns of the day Raaghu!!
sad sad poem
hope u enjoyed ur birthday
:-)
malathi S

Anonymous said...

ಏನಾಗಿದೆ ? ಚೆನ್ನಾಗಿದೆ! ನಿಮ್ಮ ಪ್ರಯತ್ನ ಸಫಲವಾಗಿದೆ ! ಇನ್ನೂ ಹೆಚ್ಚಿನ ಪ್ರಯತ್ನಶೀಲರಾಗಿ, ಬೆಳೆಯಿರಿ, ಶುಭ ಹಾರೈಕೆಗಳು

V.R.BHAT said...

ಏನಾಗಿದೆ ? ಚೆನ್ನಾಗಿದೆ! ನಿಮ್ಮ ಪ್ರಯತ್ನ ಸಫಲವಾಗಿದೆ ! ಇನ್ನೂ ಹೆಚ್ಚಿನ ಪ್ರಯತ್ನಶೀಲರಾಗಿ, ಬೆಳೆಯಿರಿ, ಶುಭ ಹಾರೈಕೆಗಳು

M@he$h said...

kavana tumab chennagide,, pratiyondu lines superb...


*********************************
http://bhuminavilu.blogspot.com/
*********************************

Raghu said...

Thank you Kanthi.
Raaghu

Raghu said...

ಶ್ರೀಧರ್, ಮಹೇಶ್ ತುಂಬಾ ತುಂಬಾ ಧನ್ಯವಾದಗಳು.
ನಿಮ್ಮವ,
ರಾಘು.

Raghu said...

ಮಾಲತಿ ಅವರೇ...
:) ಥ್ಯಾಂಕ್ ಯು...
ಕವನ ಸ್ವಲ್ಪ sadagi ಇದೆ. ಸ್ವಲ್ಪ ಹಾಗೆ ಸ್ವಲ್ಪ ಬದಲಾವಣೆಗಾಗಿ ..:)
ಹುಟ್ಟಿದ ದಿನ ವಿಶೇಷ ಅಂತ ಏನು ಇಲ್ಲ. ಎಲ್ಲಾ ದಿನಗಳಂತೆ ಇದು ಒಂದು ದಿನ.
ಹಾಗೆ ಸುಮ್ನೇ ಅಂತ ಸ್ನೇಹಿತರ ಕಾಲ್ ಜಾಸ್ತಿ ಅವತ್ತು.

ಭಟ್ ಅವರೇ
ಏನಾಗಿದೆ, ಏಕಾಗಿದೆ... ಅಲ್ವ..:) ಚೆನ್ನಾಗಿದೆ!
ಧನ್ಯವಾದಗಳು...

ನಿಮ್ಮವ,
ರಾಘು.

shivu.k said...

ನಿಮ್ಮ ಬ್ಲಾಗಿಗೆ ಮೊದಲ ಬೇಟಿ. ಕವನ ಓದಿದೆ. ಚೆನ್ನಾಗಿ ಬರೆಯುತ್ತೀರಿ.

Bhavana Rao said...

Nicely written :) I am trying to "follow" your blog, but the page is not displaying :(

Guruprasad . Sringeri said...

ವಾವ್... ಅದ್ಭುತವಾದ ಭಾವನೆಗಳನ್ನು ಪದಪುಂಜಗಳಲ್ಲಿ ಸುಂದರವಾಗಿ ಸೆರೆಹಿಡಿದಿರುವಿರಿ...ತುಂಬಾ ಇಷ್ಟವಾಯಿತು... ರಾಗ ಸಂಯೋಜನೆ ಮಾಡಿ ಹಾಡಿ ಸಾರ್... ಒಳ್ಳೇ ಭಾವವಿದೆ.