Thursday, July 15, 2010

ಮನೆ ಮಗು

ಪ್ರತಿ ಮನೆಯಲಿ ಒಂದು ಮಗುವಿರಬೇಕು
ಅದರ ತುಟಿಯಲಿ ಸ್ವಲ್ಪ ನಗುವಿರಬೇಕು
ದಿನವಿಡೀ
ಸಣ್ಣ ಮುದ್ದು ಹಟವ ಮಾಡುತಲಿರಬೇಕು
ಕೇಳಿದ ಕೂಡಲೇ ಸಿಹಿ ಮುತ್ತು, ಕಹಿ ಮುತ್ತು
ಎನ್ನುತ ಮುತ್ತನು ಕೊಡುತಿರಬೇಕು

ಪ್ರತಿ ಮನೆಯಲಿ ಒಂದು ಮಗುವಿರಬೇಕು
ಅದರ ತುಟಿಯಲಿ ಸ್ವಲ್ಪ ನಗುವಿರಬೇಕು..

ಯಜಮಾನನ ಹಾಗೆ ತಾ ಹೇಳುವ ಕೆಲಸವ
ಮನೆಮಂದಿ ಆಳಿನ ಹಾಗೆ ಮಾಡುತಲಿರಬೇಕು
ಸುಮ್ಮನೆ ಎಲ್ಲರೂ ಕೆಲಸವ ಮಾಡುತಲಿರಬೇಕು
ಖುಷಿಯಲಿ ಕಂದ ನೀಡುವ ಮುತ್ತಿಗೆ
ಮನೆಮಂದಿ ಎಲ್ಲರೂ ಕಾಯುತಲಿರಬೇಕು,
ಸುಮ್ಮನೆ ಎಲ್ಲರೂ ಕಾಯುತಲಿರಬೇಕು.

ಪ್ರತಿ ಮನೆಯಲಿ ಒಂದು ಮಗುವಿರಬೇಕು
ಅದರ ತುಟಿಯಲಿ ಸ್ವಲ್ಪ ನಗುವಿರಬೇಕು..

ಅಪ್ಪನ ಕೋಪ, ಅಮ್ಮನ ದಣಿವು
ಎಲ್ಲವ ನಗುವಲಿ ಮರೆಸುತಲಿರಬೇಕು
ಕಂದ ನೀ, ಎಲ್ಲರ ನೋವ
ನಗುವಲಿ ಮರೆಸುತಲಿರಬೇಕು
ನೀ ಹಗಲಿಗೆ ಸೂರ್ಯ, ಇರುಳಿಗೆ ಚಂದ್ರನಂತೆ
ಮನೆಯ ನೀ ಬೆಳಗುತಲಿರಬೇಕು

ಪ್ರತಿ ಮನೆಯಲಿ ಒಂದು ಮಗುವಿರಬೇಕು
ಅದರ ತುಟಿಯಲಿ ಸ್ವಲ್ಪ ನಗುವಿರಬೇಕು..

ನಿಮ್ಮವ,
ರಾಘು.

45 comments:

Dr.D.T.Krishna Murthy. said...

ರಾಘೂ;ಕವನ ಚೆನ್ನಾಗಿದೆ.ನಿಮ್ಮ ಕವನ ಓದಿ ,ಎಸ್.ಜಾನಕಿಯವರು ಹಾಡಿದ ಗೆಜ್ಜೆ ಪೂಜೆ ಚಿತ್ರದ ನನಗೆ ತುಂಬಾ ಇಷ್ಟವಾದ ಹಾಡು;'ಮಗುವೇ,ನಿನ್ನ ಹೂನಗೆ!ಒಡವೆ ನನ್ನ ಬಾಳಿಗೆ'ಎನ್ನುವ ಹಾಡು ನೆನಪಾಯಿತು!ಧನ್ಯವಾದಗಳು.

ಸೀತಾರಾಮ. ಕೆ. / SITARAM.K said...

ಸ್ವಲ್ಪ ಬೇಡ, ತುಂಬಾ ನಗುವಿರಲಿ.
ಮಗುವೊಂದು ಹೇಗೆ ಮನೆಯ ವಾತಾವರಣವನ್ನ ತಿಳಿಗೊಳಿಸುವದು ಮತ್ತು ಆ ಆಶಯದ ಚೆಂದದ ಕವನ

ಮನಸು said...

raaghu kavana chennagide.......nija maneyali maguviddare alli nagu iddee irutte

Subrahmanya said...

ತುಂಬ ಚೆನ್ನಾಗಿದೆ. "ಕೂಸು ಇದ್ದ ಮನಿಗೆ ಬೀಸಣಿಗೆ ಯಾತಾಕ, ? " ಎನ್ನುವಂತೆ, ಮಗುವಿದ್ದ ಮನೆಯಲ್ಲಿ ಆನಂದವೆ.

ಅನಂತ್ ರಾಜ್ said...

ಮಗು..ವಿನ ಕವನ ಚೆ೦ದವಿದೆ ರಾಘು..

ಅನ೦ತ್

mcs.shetty said...

ಕವನ ಚೆನ್ನಾಗಿದೆ......

ಸಾಗರಿ.. said...

ಮಗು ನಕ್ಕರೆ ಎಂತಹ ದಣಿವೂ ಪಕ್ಕನೆ ಮಾಯವಾಗುತ್ತೆ, ಚೆಂದದ ಕವನ

V.R.BHAT said...

ಕವನ ಚೆನ್ನಾಗಿದೆ, ಮಗುವಿನ ನಡತೆಯೇ ಖುಷಿ ಕೊಡುವಂಥದು!

Ittigecement said...

ರಘು...

ಸೊಗಸಾಗಿದೆ ಕವನ...

ಪ್ರತಿ
ಮೊಗವೂ...
ದುಃಖಿಸ ಬೇಕು..
ಅಳಬೇಕು..
ಸಂತಸದಿ.. ನಗುತಿರಬೇಕು...
ಗೆಳೆಯಾ..
ಪ್ರತಿ ಮನದಲೂ..
ಒಂದು..
ಮಗುವಿರಬೇಕು..

shivu.k said...

ರಘುರವರೆ,

ಮಗುವನ್ನು ಕವನ ಚೆನ್ನಾಗಿದೆ. ಒಂದು ಮನೆಗೆ ಮಗುವಿದ್ದರೆ ಮನೆಯೇ ನಂದಗೋಕುಲ. ಕವನ ಇಷ್ಟವಾಯಿತು.

Snow White said...

tumba chennagide sir kavana..makaliruva mane tumba khushi tarutadde..:)

sunaath said...

ರಾಘು,
ವಾತ್ಸಲ್ಯಭರಿತ ಭಾವಗೀತೆ. ಭಾವಪೂರ್ಣವಾಗಿದೆ. ಹಾಡಿಕೊಳ್ಳಲೂ ಸಹ ಸೊಗಸಾಗಿದೆ. ಅಭಿನಂದನೆಗಳು.

ತೇಜಸ್ವಿನಿ ಹೆಗಡೆ said...

ಕವನ ಚೆನ್ನಾಗಿದೆ. ಇಷ್ಟವಾಯಿತು. ಆದರೆ ಮಗುವಿನ ಮುತ್ತಿನಲಿ ಸಿಹಿ ಒಂದೇ ಇರುವುದು.. "ಕಹಿ"ಗೆಲ್ಲಿಯ ಸ್ಥಾನ ಎಂದೆನಿಸಿತು ಅಷ್ಟೇ :)

ಮನಸಿನ ಮಾತುಗಳು said...

ರಘು,

ಕವನ ಚೆನ್ನಾಗಿದೆ..:)
"ಮಕ್ಕಳಿರಲವ್ವ ಮನೆ ತುಂಬಾ ...."ನೆನಪಾಯ್ತು.. :)

shravana said...

ಚೆನ್ನಾಗಿದೆ ಕವನ..:)

Unknown said...

Chennaagide..

ಮನಮುಕ್ತಾ said...

ಮುದ್ದಾದ.. ಸು೦ದರ ಕವನ.. ನನಗೆ ಹಿಡಿಸಿತು.

ಜಲನಯನ said...

ರಾಘು...ಚೆನ್ನಾಗಿದೆ..ನಿಮ್ಮ ಭಾವಮಂಥಿತ ಕವನ....ಅಪ್ಪನ ಕೋಪಕ್ಕೆ ಅಮ್ಮನ ದಣಿವನ್ನ ಮೇಳೈಸಿರೋ ಪರಿ ಇಷ್ಟವಾಯ್ತು...

ಶಿವಪ್ರಕಾಶ್ said...

Nice one raghu... i liked it..

nimma gtalk nalli haakidda maguvina photo ee kavanakke haakabekittu... :)

Raghu said...

ಮೂರ್ತಿ ಅವರೇ..
ಕವನ ಇಷ್ಟಪಟ್ಟಿದಕ್ಕೆ ತುಂಬಾ ಖುಷಿಯಾಯಿತು..
ಜಾನಕಿಯಮ್ಮ ಹೇಳಿದ ಮೇಲೆ ಮುಗಿತು..ಅವರ ಕಂಠನೆ ಹಾಗೆ
ಧನ್ಯವಾದಗಳು.

ಸೀತಾರಾಂ ಸರ್..
ನಿಜಯಾಗಿಯು..ಮಗುಒಂದು ಮನೆಯಲಿ ಇದ್ದರೆ ಮನೆಯಲ್ಲಿ ಎಲ್ಲರೂ ಖುಷಿ ಖುಷಿಯಾಗಿ ಇರ್ತಾರೆ..
ಧನ್ಯವಾದಗಳು.

ಮನಸು ಅವರೇ..
ಕವನ ಬೆರೆಯುವಾಗ ನನಗು ತುಂಬಾನೇ ಖುಷಿಯಾಯಿತು..
ಮಕ್ಕಳ ನಗುವೇ ಹಾಗೆ...
ತುಂಬಾ ಧನ್ಯವಾದಗಳು.

ನಿಮ್ಮವ,
ರಾಘು.

Raghu said...

ಸುಬ್ರಹ್ಮಣ್ಯ ಅವರೇ..
"ಕೂಸು ಇದ್ದ ಮನಿಗೆ ಬೀಸಣಿಗೆ ಯಾತಾಕ, ? " ಸರಿಯಾದ ಮಾತು ಹೇಳಿದ್ರಿ..
ಮನೆಗೆ ಮಕ್ಕಳೇ ಎಲ್ಲಾ..
ಧನ್ಯವಾದಗಳು...

ಅನಂತ್ ಸರ್ ,ಶೆಟ್ಟಿ ಅವರೇ..
ಮನೆ ಮಗು ಮೆಚ್ಚಿದಕ್ಕೆ ಧನ್ಯವಾದಗಳು...

ಸಾಗರಿ..
ಮಗು ನಕ್ಕರೆ ಎಂತಹ ದಣಿವೂ ಪಕ್ಕನೆ ಮಾಯವಾಗುತ್ತೆ..ಅಲ್ಲವೇ ಮತ್ತೆ..ಮನೆ ಮಗು ಮನೆ ಮದ್ದು..!
ಧನ್ಯವಾದಗಳು...

ನಿಮ್ಮವ,
ರಾಘು.

Raghu said...

ವಿ.ಆರ್.ಭಟ್ ಅವರೇ..
ಮಗುವಿನ ನಡತೆಯೇ ಖುಷಿ ಕೊಡುವಂಥದು..ಮುಗ್ಧ ಮನಸ್ಸಿನ ಮಾತುಗಳು ಕೇಳಲು ಹಿತಕರ..
ಧನ್ಯವಾದಗಳು..

ಪ್ರಕಾಶಣ್ಣ..
ಪ್ರತಿ ಮನದಲೂ..
ಒಂದು..
ಮಗುವಿರಬೇಕು.ಸರಿಯಾಗಿದೆ..
ಮನಸ್ಸು ಮಗುವಿನ ಮನಸ್ಸಾಗಿರಬೇಕು..
ತನು ಮನ ಮನೆ ಎಲ್ಲಾ ಆನಂದಮಯ....
ಧನ್ಯವಾದಗಳು..

ಶಿವೂ ಅವರೇ..
ನಂದಗೋಕುಲ..!
ಹೌದು. ತುಂಬಾ ಮಕ್ಕಳು ಒಟ್ಟಿಗೆ ಸೇರಿದ್ದರೆ..ಅವುಗಳ ಹೊಂದಾಣಿಕೆ..ಆಟ..ಮಾತು..ನಗು..ಎಲ್ಲಾ
ಚಂದ..
ಧನ್ಯವಾದಗಳು..

ನಿಮ್ಮವ,
ರಾಘು.

Guruprasad . Sringeri said...

ಚೆನ್ನಾಗಿದೆ ರಾಘು ಅವರೆ.,

ಅಪ್ಪನ ಕೋಪ, ಅಮ್ಮನ ದಣಿವು
ಎಲ್ಲವ ನಗುವಲಿ ಮರೆಸುತಲಿರಬೇಕು
ಕಂದ ನೀ, ಎಲ್ಲರ ನೋವ
ನಗುವಲಿ ಮರೆಸುತಲಿರಬೇಕು
ನೀ ಹಗಲಿಗೆ ಸೂರ್ಯ, ಇರುಳಿಗೆ ಚಂದ್ರನಂತೆ
ಮನೆಯ ನೀ ಬೆಳಗುತಲಿರಬೇಕು

ಈ ಪ್ಯಾರ ಇಷ್ಟವಾಯಿತು :)

© ಹರೀಶ್ said...

ಮಗು ಇದ್ದಲ್ಲಿ ಮನಕೆ ಮುದನೀಡುವುದು ಕಂಡಿತಾ
ನಿಮ್ಮ ಕವನ ಚನ್ನಾಗಿದೆ. ಹೀಗೆ ಬರೆಯುತ್ತಿರಿ

ವನಿತಾ / Vanitha said...

ತುಂಬಾ ಚೆನ್ನಾಗಿದೆ..

ಹಳ್ಳಿ ಹುಡುಗ ತರುಣ್ said...

kavan chennaagide raghu vare. mugda manasina maguvina bagge chennagi barediddira.. navu maguvaage iddare yestu sundaravaagirutittu.... ? :)

AntharangadaMaathugalu said...

ಮಗುವಿರುವ ಕಡೆ ನಗು ಸಾಂಕ್ರಾಮಿಕವಾಗಿರತ್ತೆ.... ಕವನ ಚೆನ್ನಾಗಿದೆ ರಾಘು...

ಶ್ಯಾಮಲ

Ashok.V.Shetty, Kodlady said...

ಹಾಯ್ ರಾಘು,

ನಿಮ್ಮ ಕವನ ತುಂಬಾ ಚೆನ್ನಾಗಿದೆ....ನಮ್ಮ ಮನೇಲಿ ಸಣ್ಣ ಪಾಪು ಇರೋದ್ರಿಂದ ನಿಮ್ಮ ಕವನ ಇನ್ನೂ ಸುಂದರವಾಗಿ ಕಾಣಿಸ್ತು...ನಮ್ಮ ಪಾಪು ಮಾಡೋ ಎಲ್ಲ ಚಟುವಟಿಕೆಗಳನ್ನು ನಿಮ್ಮ ಕವನದಲ್ಲಿ ಕಂಡೆ. ತುಂಬಾ ಸೊಗಸಾಗಿದೆ.....

ನನ್ನ ಬ್ಲಾಗ್ ಗೆ ಭೇಟಿ ಕೊಟ್ಟಿದ್ದಕ್ಕೆ ಧನ್ಯವಾದಗಳು...ಹೀಗೆ ಬರ್ತಾ ಇರಿ.

prabhamani nagaraja said...

'ಪ್ರತಿ ಮನವೂ ಒ೦ದು ಮಗುವಾಗಬೇಕು. ಮಗುವಿನ೦ಥಾ ಮನಸ್ಸಿರಬೇಕು. ಅಲ್ಲವೇ? ಉತ್ತಮ ಕವನ ನೀಡಿದ್ದಕ್ಕಾಗಿ ಧನ್ಯವಾದಗಳು. ನನ್ನ ಬ್ಲಾಗ್ ಗೊಮ್ಮೆ ಭೇಟಿ ಕೊಡಿ.

PARAANJAPE K.N. said...

ರಾಘು, ಮೊದಲ ಬಾರಿ ನಿಮ್ಮ ಬ್ಲಾಗ್ ಮನೆಗೆ ಬ೦ದೆ, ಖುಷಿ ಆಯ್ತು. ಇನ್ನಷ್ಟು ಬರೀರಿ.

ಸುಧೇಶ್ ಶೆಟ್ಟಿ said...

nimma kavanagaLu chennagive Raghu avare... saraLavaada padhagaLalli sundharavaagi kavana kattutteeri....

*ಚುಕ್ಕಿ* said...

ನಮಸ್ತೆ,

ಮಗು ನಮ್ಮ ಕನಸುಗಳ ವಾರಸುದಾರ
ಮನೆ - ಮನೆತನಗಳ ಸರದಾರ,
ಮದುರ ದಾಂಪತ್ಯದ ದೃಷ್ಟಿ ಬೊಟ್ಟು,
ಮಗುವಿದ್ದರೆ ಮನೆಯೊಳಗೇ,
ಮನೆಯೇಲ್ಲೆಲ್ಲ ನಗುವಿನ ತೋರಣ,
ಮಗುವಿನ ನಗುವಿದ್ದರೆ ಮನದೊಳಗೆ,
ನಮ್ಮ ಬದುಕೆಲ್ಲ ಸಂತಸದ ಹೂರಣ.

ಒಬ್ಬ ಮಗುವಿನ ತಂದೆ ಮಾತ್ರ ಇಂತಹ ಸದಾಶಯದ ಕವಿತೆಗಳಿಗೆ ದನಿಯಾಗಬಲ್ಲರು. ಧನ್ಯವಾದಗಳು, ನಮ್ಮ ತುಟಿಯಂಚಲ್ಲಿ ನಗೆ ಮೂಡಿಸಿದ್ದಕ್ಕೆ, ಮಗುವಿನ (ಮಗ : ಹಿಮಘನ ತೇಜಸ್ ,09 ತಿಂಗಳ ಹೀರೋ )ನೆನಪು ತರಿಸಿದ್ದಕೆ. ಶುಭ ಹಾರೈಕೆಗಳು.

SATISH N GOWDA said...

ಸರ್ ನಿಮ್ಮ ಬ್ಲಾಗಿಗೆ ಇದು ನನ್ನ ಮೊದಲ ಬೇಟಿ ........
ಸುಂದರ ಕವನಗಳು ,ಸುಮಧುರ ಸಾಲುಗಳು , ಅದ್ಭುತ ಕಲ್ಪನೆ ..... ಸುಂದರವಾಗಿದೆ ಬಿಡುವು ಮಾಡಿಕೊಂಡು ನನ್ನವಳಲೋಕಕ್ಕೆ ಒಮ್ಮೆ ಬನ್ನಿ .... ನಿಮಗೆ ನನ್ನವಳಲೋಕಕ್ಕೆ ಆತ್ಮಿಯ ಸ್ವಾಗತ


SATISH N GOWDA

http://nannavalaloka.blogspot.com/

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ಮುದ್ದಾದ.. ಸು೦ದರ ಕವನ..

ಮಗುವಿನ ನಡತೆಯೇ ಖುಷಿ ಕೊಡುವಂಥದು!

Creativity said...

ಕವನ ಚೆನ್ನಾಗಿದೆ.

ವಿದ್ಯಾ ರಮೇಶ್ said...

ನಾನು ಈಗಷ್ಟೆ ನಿಮ್ಮ ಬ್ಲಾಗ್ ನೋಡ್ತಿರೋದು, ತುಂಬಾ ಚೆನ್ನಾಗಿದೆ ಮಗುವಿನ ಕವನ, ನನ್ನ ಪುಟ್ಟ ಮಗನ ನೆನಪಾಯ್ತು.

Sati said...

"ಮಗು ನೀ ನಗು ಕಿರು ನಗೆ ನಗು, ಮೋಹಕ ತುಟಿಯ ಅಂಚಿನಲ್ಲಿ"..... ನಿಮ್ಮ ಕವನ ತುಂಬಾ ಸುಂದರವಾಗಿದೆ.
ಧನ್ಯವಾದಗಳು
ಸತೀಶ

Manjunatha Kollegala said...

Nice and delicate

ಜಿ.ಎಸ್.ಬಿ. ಅಗ್ನಿಹೋತ್ರಿ said...

Tumba chennagide, munduvarisi...congrats.
And
nimma kavanagalige suktavada ondu chitra balasikondare innu chennagirutte.

Gubbachchi Sathish said...

ಮಗು ಇಲ್ಲದ ಮನೆ ಉಹಿಸಿಕೊಳ್ಳಲೂ ಸಾಧ್ಯವಿಲ್ಲ.
ನೀವು ಚೆನ್ನಾಗಿ ಬರೆದಿದ್ದೀರಾ...

ಚಿಂವ್ ಚಿಂವ್.

Pradeep Rao said...

ಚೆಂದದ ಕವನ ರಾಘುರವರೇ.. ಯಾವುದೋ ರಾಗಕ್ಕೆ ತಕ್ಕಂತೆ ಬರೆದ ಹಾಡಿನಂತಿದೆ.. Good one!

Raghu said...

ಎಲ್ಲರ ಅನಿಸಿಕೆಗಳಿಗೆ ಧನ್ಯವಾದಗಳು...

ನಿಮ್ಮವ,
ರಾಘು.

Unknown said...

Reminds me of my daughter, Raaghu :)

kavinagaraj said...

ಚೆನ್ನಾಗಿದೆ, ರಾಘು. ಮಗುವಿನ ಫೋಟೋವನ್ನು ಅಳವಡಿಸಿ, ಪ್ರಭಾವಿಯಾಗಿರುತ್ತದೆ.

Anonymous said...

Sir so sewt