ಕಣ್ಣನು ಮುಚ್ಚಿ ಕನಸನು ಹಚ್ಚೀ
ನಗುವ ಮನಸ್ಸೇ ನೀ ಹೇಳು
ಇದು ಕನಸೇ ನನಸೇ ಒಮ್ಮೆ ನನ್ನ ಕೇಳು
ಆಸೆಯ ಹಕ್ಕಿ ಬಾನಿಗೆ ನೀನೇ ಚುಕ್ಕಿ
ಹಾರುತ ಸಾಗುತ ನೀ ಹೇಳು
ಇದು ಕನಸೇ ನನಸೇ ಒಮ್ಮೆ ನನ್ನ ಕೇಳು
ಇದು ಹೇಗೆ..ಇದು ಯಾಕೆ..ನಾನಂತು ತಿಳಿಯೇ
ನನ್ನೆದೆಯಾ ಧರೆಯಾ ಬೆಳಗೋ ಈ ಪ್ರೀತಿ... ಬೆಳಕೇ..ನಾನಂತು ಅರಿಯೇ..
ಒಲವಿನ ಪಾಠ ಕಲಿಸುವ ನೋಟ
ನನ್ನಲಿ ಕೇಳಿದೆ ನಿನ್ನನ್ನು
ಅನುಕ್ಷಣದ ಪ್ರೀತಿ..ಅನುರಾಗದ ರೀತಿ
ವಿವರಣೆ ಕೇಳಿದೆ ನಿನ್ನಲ್ಲಿ
ಗೆಳೆಯಾ ನೀನು ನನಗೆ ಜೀವ
ನನ್ನ ಮನದ ಕವಿತೆಗೆ ನೀನೇ ಭಾವ..
ಇದು ಹೇಗೆ..ಇದು ಯಾಕೆ..ನಾನಂತು ತಿಳಿಯೇ
ನನ್ನೆದೆಯಾ ಧರೆಯಾ ಬೆಳಗೋ ಈ ಪ್ರೀತಿ... ಬೆಳಕೇ..ನಾನಂತು ಅರಿಯೇ..
ನಿನ್ನ ನೆನಪಿನ ಉಸ್ಸವ ನಗುವಾಗಿ ನನ್ನ ಕಾಡಿದೆ
ಒಡನಾಟದ ಕಲರವ ಹಸಿರಾಗಿ ನನ್ನ ಸೇರಿದೆ
ಕಥೆಯಾಗುವ ಕಥೆಯಲ್ಲಿ..ನಾ ಎದೆ ತುಂಬಿ ಹಾಡಿದೆ
ಗೆಳೆಯಾ ನಿನ್ನ ಪ್ರೀತಿಗೆ ನಾ ಸೆರೆಯಾದೆ ನನ್ನೊಳಗೆ..
ಇದು ಹೇಗೆ..ಇದು ಯಾಕೆ..ನಾನಂತು ತಿಳಿಯೇ
ನನ್ನೆದೆಯಾ ಧರೆಯಾ ಬೆಳಗೋ ಈ ಪ್ರೀತಿ... ಬೆಳಕೇ..ನಾನಂತು ಅರಿಯೇ..
ಕಣ್ಣನು ಮುಚ್ಚಿ ಕನಸನು ಹಚ್ಚೀ
ನಗುವ ಮನಸ್ಸೇ ನೀ ಹೇಳು
ಇದು ಕನಸೇ ನನಸೇ ಒಮ್ಮೆ ನನ್ನ ಕೇಳು
ಆಸೆಯ ಹಕ್ಕಿ ಬಾನಿಗೆ ನೀನೇ ಚುಕ್ಕಿ
ಹಾರುತ ಸಾಗುತ ನೀ ಹೇಳು
ಇದು ಕನಸೇ ನನಸೇ ಒಮ್ಮೆ ನನ್ನ ಕೇಳು
ಇದು ಹೇಗೆ..ಇದು ಯಾಕೆ..ನಾನಂತು ತಿಳಿಯೇ
ನನ್ನೆದೆಯಾ ಧರೆಯಾ ಬೆಳಗೋ ಈ ಪ್ರೀತಿ... ಬೆಳಕೇ..ನಾನಂತು ಅರಿಯೇ..
ನಿಮ್ಮವ,
ರಾಘು.
ಇದು ಕನಸೇ ನನಸೇ ಒಮ್ಮೆ ನನ್ನ ಕೇಳು
ಆಸೆಯ ಹಕ್ಕಿ ಬಾನಿಗೆ ನೀನೇ ಚುಕ್ಕಿ
ಹಾರುತ ಸಾಗುತ ನೀ ಹೇಳು
ಇದು ಕನಸೇ ನನಸೇ ಒಮ್ಮೆ ನನ್ನ ಕೇಳು
ಇದು ಹೇಗೆ..ಇದು ಯಾಕೆ..ನಾನಂತು ತಿಳಿಯೇ
ನನ್ನೆದೆಯಾ ಧರೆಯಾ ಬೆಳಗೋ ಈ ಪ್ರೀತಿ... ಬೆಳಕೇ..ನಾನಂತು ಅರಿಯೇ..
ಒಲವಿನ ಪಾಠ ಕಲಿಸುವ ನೋಟ
ನನ್ನಲಿ ಕೇಳಿದೆ ನಿನ್ನನ್ನು
ಅನುಕ್ಷಣದ ಪ್ರೀತಿ..ಅನುರಾಗದ ರೀತಿ
ವಿವರಣೆ ಕೇಳಿದೆ ನಿನ್ನಲ್ಲಿ
ಗೆಳೆಯಾ ನೀನು ನನಗೆ ಜೀವ
ನನ್ನ ಮನದ ಕವಿತೆಗೆ ನೀನೇ ಭಾವ..
ಇದು ಹೇಗೆ..ಇದು ಯಾಕೆ..ನಾನಂತು ತಿಳಿಯೇ
ನನ್ನೆದೆಯಾ ಧರೆಯಾ ಬೆಳಗೋ ಈ ಪ್ರೀತಿ... ಬೆಳಕೇ..ನಾನಂತು ಅರಿಯೇ..
ನಿನ್ನ ನೆನಪಿನ ಉಸ್ಸವ ನಗುವಾಗಿ ನನ್ನ ಕಾಡಿದೆ
ಒಡನಾಟದ ಕಲರವ ಹಸಿರಾಗಿ ನನ್ನ ಸೇರಿದೆ
ಕಥೆಯಾಗುವ ಕಥೆಯಲ್ಲಿ..ನಾ ಎದೆ ತುಂಬಿ ಹಾಡಿದೆ
ಗೆಳೆಯಾ ನಿನ್ನ ಪ್ರೀತಿಗೆ ನಾ ಸೆರೆಯಾದೆ ನನ್ನೊಳಗೆ..
ಇದು ಹೇಗೆ..ಇದು ಯಾಕೆ..ನಾನಂತು ತಿಳಿಯೇ
ನನ್ನೆದೆಯಾ ಧರೆಯಾ ಬೆಳಗೋ ಈ ಪ್ರೀತಿ... ಬೆಳಕೇ..ನಾನಂತು ಅರಿಯೇ..
ಕಣ್ಣನು ಮುಚ್ಚಿ ಕನಸನು ಹಚ್ಚೀ
ನಗುವ ಮನಸ್ಸೇ ನೀ ಹೇಳು
ಇದು ಕನಸೇ ನನಸೇ ಒಮ್ಮೆ ನನ್ನ ಕೇಳು
ಆಸೆಯ ಹಕ್ಕಿ ಬಾನಿಗೆ ನೀನೇ ಚುಕ್ಕಿ
ಹಾರುತ ಸಾಗುತ ನೀ ಹೇಳು
ಇದು ಕನಸೇ ನನಸೇ ಒಮ್ಮೆ ನನ್ನ ಕೇಳು
ಇದು ಹೇಗೆ..ಇದು ಯಾಕೆ..ನಾನಂತು ತಿಳಿಯೇ
ನನ್ನೆದೆಯಾ ಧರೆಯಾ ಬೆಳಗೋ ಈ ಪ್ರೀತಿ... ಬೆಳಕೇ..ನಾನಂತು ಅರಿಯೇ..
ನಿಮ್ಮವ,
ರಾಘು.
29 comments:
ರಾಘು,
ನಿಮ್ಮ ಕನಸೆಲ್ಲಾ ನನಸಾಗಲಿ, ಪ್ರಾಸ ಪೂರ್ಣ ಕವನ!
ಮೌನದ ಪದಗಳು ಮತ್ತೆ ಮಾತಾಡಿತು...:):)
ಆಲ್ ದ ಬೆಸ್ಟ್..
ಜೈ ಹೋ ರಾಘು....ಅಂತೂ ಬಂದ್ಯಲ್ಲಪ್ಪಾ ಬ್ಲಾಗಿಗೆ...ಅದೂ ಸೂಪರ್ ಕವನದೊಂದಿಗೆ...!!!
ಕಣ್ಣನು ಮುಚ್ಚಿ ಕನಸನು ಹಚ್ಚೀ
ನಗುವ ಮನಸ್ಸೇ ನೀ ಹೇಳು
ಇದು ಕನಸೇ ನನಸೇ ಒಮ್ಮೆ ನನ್ನ ಕೇಳು
ಇದು ಕನಸಲ್ಲ ನನಸು ಅಂತಲೇ ಹೇಳ್ತೀವಿ...ಮುಂದುವರೆಯಲಿ...ಬ್ಲಾಗ್ ಪಯಣ...
Raghu, Its nice, keep writing !
ರಾಘು,
ಹೇಗೋ ಮರಳಿ ಗೂಡಿಗೆ ಬಂದೆಯಲ್ಲ... ತುಂಬಾ ಚೆನ್ನಾಗಿದೆ ಕವನ... ಹೀಗೆ ಬರಿತಾ ಇರು, ಮತ್ತೆ ಮಾಯವಾಗಬೇಡ...ಹಹಹ
super kanreeeeeeee...........
Super guru... My suggestion
ಆಸೆಯ ಹಕ್ಕಿ ಬಾನಿಗೆ ನೀನೇ ಚುಕ್ಕಿ
ಬದಲಾಗಿ u can use
ಆಸೆಯ ಹಕ್ಕಿ ಬಾನನು ಮೆಚ್ಚಿ
ದೀರ್ಘ ವಿಳಂಬದ ನಂತರ ಬ್ಲಾಗ್ ಲೋಕಕ್ಕೆ ಹೊಸ ಕನಸುಗಳೊಂದಿಗೆ ಮರಳಿದ್ದೀರಿ.ನಿಮ್ಮ ಬ್ಲಾಗ್ ಪಯಣ ಹೀಗೇ ಆಹ್ಲಾದಕರವಾಗಿರಲಿ.
ಸುಂದರ ಕವನದೊಂದಿಗೆ ಬ್ಲಾಗ್ ಗೆ ಮರಳಿರುವ ರಾಘೂ ಗೆ ಅಭಿನಂದನೆಗಳು. ಕವನ ಧಾರೆ ಹೀಗೆ ಹರಿಯುತಿರಲಿ.
ಕಣ್ಣನು ಮುಚ್ಚಿ ಕನಸನು ಹಚ್ಚೀ ..
ಆಸೆಯ ಹಕ್ಕಿ ಬಾನಿಗೆ ನೀನೇ ..
ಪ್ರಾಸಗಳು ಚೆನ್ನಾಗಿ ಬಂದಿವೆ.. welcome back :)
ಕವನ ಚೆನ್ನಾಗಿದೆ.. ಬರೆಯಿತ್ತಿರಿ.. :-)
- ಪ್ರಸನ್ನ
Raaghu,
kavana chennagide....mounada padagaLu hagaga swalpa saddu maadutirali....baritha iru...
ರಾಘು,
ಕ೦ಡ ಕನಸುಗಳು ನನಸಾಗಿ,ಚೆ೦ದದ ಕವನಗಳು ಬರುತ್ತಿರಲಿ..ಬರೆಯುತ್ತಿರಿ.
ಸುಸ್ವಾಗತ ರಾಘು...ಉತ್ತಮ ಕವನದೊಡನೆ ಭಜ೯ರಿ ಇನ್ನಿ೦ಗ್ಸ್ ಆರ೦ಭಿಸಿದ್ದೀರಿ. ಅಭಿನ೦ದನೆಗಳು.
ಅನ೦ತ್
ನಿನ್ನ ನೆನಪಿನ ಉಸ್ಸವ ನಗುವಾಗಿ ನನ್ನ ಕಾಡಿದೆ
ಒಡನಾಟದ ಕಲರವ ಹಸಿರಾಗಿ ನನ್ನ ಸೇರಿದೆ
ಕಥೆಯಾಗುವ ಕಥೆಯಲ್ಲಿ..ನಾ ಎದೆ ತುಂಬಿ ಹಾಡಿದೆ
ಗೆಳೆಯಾ ನಿನ್ನ ಪ್ರೀತಿಗೆ ನಾ ಸೆರೆಯಾದೆ ನನ್ನೊಳಗೆ..
ಆಹಾ.. ಎಂಥಾ ಸಾಲುಗಳು.. ದಯವಿಟ್ಟು ನೀವು ನಮ್ಮ ಕನ್ನಡ ಚಿತ್ರ ರಂಗ ಸೇರಿ ಹಾಡುಗಳಿಗೆ ಸಾಹಿತ್ಯ ಬರೀರಿ ಮಹನೀಯರೇ.. ಇಂತಹ quality ಬೇಕಿದೆ.. ಗಲೀಜು ಸಾಹಿತ್ಯ ಕೇಳಿ ಕೇಳಿ ಬೇಸತ್ತಿದೆ ಮನ..
yeshtu arthapurna! gr8 writing :)
oh naanu nimma 101 ney follower!
let d next century being with me :)
ಧನ್ಯವಾದ ಪ್ರಭಾಮಣಿಯವರಿಗೆ..
ಕವನ ಇಷ್ಟಪಟ್ಟಿದಕ್ಕೆ ಥ್ಯಾಂಕ್ಸ್!!
ನಿಮ್ಮವ,
ರಾಘು.
ಚುಕ್ಕಿಚಿತ್ತಾರ ಮೇಡಂ ತುಂಬಾ ಥ್ಯಾಂಕ್ಸ್..ಹೀಗೆ ಬರುತ್ತಿರಿ..
ಆಜಾದ್ ಸರ್ ನಿಮ್ಮ ಪ್ರೋಸ್ಸಹ..ತುಂಬಾ ದಿನದ ನಂತರ ಬ್ಲಾಗ್ ಕಡೆ ಬಂದಿದ್ದು..ಅದರೂ ನಾನು ನಿಮ್ಮೆಲ್ಲರ ನೆನಪಿನ ಜೊತೆ ಇದ್ದೇನೆ..
ವಿ ರ್ ಭಟ್ರಿಗೆ ತುಂಬಾ ಥ್ಯಾಂಕ್ಸ್..
ನಿಮ್ಮವ,
ರಾಘು.
ಸುಗುನಕ್ಕನಿಗೆ ಜೈ..!! ನೀವು ಹೇಳಿದಹಾಗೆ ಆಗಲಿ..
ಶೆಟ್ಟಿ ಅವ್ರಿಗೆ ತುಂಬಾ ಥ್ಯಾಂಕ್ಸ್...
ಶ್ರೀಧರ್ ಥ್ಯಾಂಕ್ಸ್..ನಿಮ್ಮsuggestion ನನ್ನ ವೆಲ್ಕಮ್..ಹೀಗೆ ನನ್ನನ್ನು ತಿದ್ಡುತ್ತಿರಿ..ಆಗ ಇನ್ನೊಬ್ಬರ ಮನಸ್ಸನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ..ಥ್ಯಾಂಕ್ಸ್ !!
ಸುನಾಥ್ ಅವರಿಗೆ ತುಂಬಾ ಧನ್ಯವಾದಗಳು..
ಓ ಮನಸೇ, ನೀನೇಕೆ ಹೀಗೆ...ನಾವು ಹಾಗೆ..!! ಬರುತ್ತಿರಿ..ಥ್ಯಾಂಕ್ಸ್!!
ನಿಮ್ಮವ,
ರಾಘು.
ರವಿಂದ್ರ ಅಂಡ್ ಪ್ರಸನ್ನ...ಕವನ ಇಷ್ಟಪಟ್ಟಿದಕ್ಕೆ ತುಂಬಾ ಥ್ಯಾಂಕ್ಸ್..
ಮಹೇಶಣ್ಣ..ನಿಮ್ಮ ಪ್ರೋಸ್ಸಹ ಸದಾ ಹೀಗೆ ಇರಲಿ..ಧನ್ಯವಾದಗಳು...
ಮನಮುಕ್ತಾ..ಹೀಗೆ ಬರುತ್ತಿರಿ..ಧನ್ಯವಾದಗಳು...
ಅನಂತ ಸರ್ ತುಂಬಾ ಥ್ಯಾಂಕ್ಸ್...
ನಿಮ್ಮವ,
ರಾಘು.
Spicy Sweet..
ನಿಮ್ಮ ಹೆಸರು ತಿಳಿಯಲಿಲ್ಲ..ಸಾರೀ..
ಕಾಲವನ್ನು ತಡೆಯೋರು ಯಾರು ಇಲ್ಲ..ನಿಮ್ಮ ಪ್ರೋಸ್ಸಹ ಸಾದಾ ಹೇಗೆ ಇರಲಿ..ಇಂದಲ್ಲಾ ನಾಳೆ ನಿಮ್ಮ ಮುಂದೆ ಒಳ್ಳೆಯ ಸಾಹಿತ್ಯ ಕೊಡುತ್ತೇನೆ...ಎಲ್ಲದಕ್ಕೂ ಸರಿಯಾದ ಸಮಯ ಜೊತೆಗೆ ಅದೃಷ್ಟದ ಕದ ತೆರೆಯಬೇಕು..ಎಲ್ಲಾ ಒಳ್ಳೆದಾಗಲಿ..
ನಿಮಗೆ ಧನ್ಯದಗಳು..
ನಿಮ್ಮವ,
ರಾಘು.
ಸುಜಾತ ಅವರಿಗೆ...ತುಂಬಾ ಧನ್ಯವಾದಗಳು...ಕವನ ಮೆಚ್ಚಿದಕ್ಕೆ..
ಹೌದು..ನೀವು ಹೇಗೆ ಹೇಳ್ತಿರೋ ಹಾಗೆ..!! :)
ನಿಮ್ಮವ,
ರಾಘು.
ರಾಘು,
ಒಂದು ಸುಂದರ ಕವನ ಓದಿದೆ. ನಿಮ್ಮ ಪ್ರಾರಂಭ ಚೆನ್ನಾಗಿದೆ..ಇನ್ನಷ್ಟು ಬರೆಯಿರಿ..
Naanu Kela dinagalinda blog Kade bandiralilla...adakke tadavgi uttarisutiddene.....
Kavana tumbaa chennagide...ella salugalu ishtavadavu..Dhanyavadagalu...
First time here and nanage kannada baraha gottilla . it was nice reading through your thoughts..
preetiya kanasu..
huuvina manasu
badukinali sogasu
nimmadaagali..:))
preetiya belaku sadaa bealagali..
nice lines sir..
Nee.. kannige reppeyashte saniha!!!
Nee.. thutige naguvinashte saniha!!!
Nee.. shwaasakke usirinashte saniha!!!
Aadare nenapinallashte!
Nee.. yendigintha saniha!!!
Post a Comment