Tuesday, October 27, 2009

ಏಕಾಂಗಿ

ಯಾರಿಗೆ ಯಾರೂ ಇಲ್ಲ ನನಗೆ ನಾನೇ ಎಲ್ಲಾ
ಕಂಬನಿ ಒರೆಸುವ ಕೈಗಳಿಲ್ಲ
ನೊಂದ ಭಾವಕೆ ಸಾಂತ್ವನ ಹೇಳುವವರಿಲ್ಲ
ಮನ ತುಂಬಿ ನಗುವ ಮನ ನನ್ನಲ್ಲಿ ಇಂದಿಲ್ಲ
ನಗಿಸುವ ಗುಣ ಯಾರಲ್ಲೂ ಇಲ್ಲ
ಯಾರಿಗೆ ಯಾರೂ ಇಲ್ಲ ನನಗೆ ನಾನೇ ಎಲ್ಲಾ...

ಇರುಳಲಿ ಚಂದ್ರನ ಸುಳಿವಿಲ್ಲ
ಹಗಲೆಂಬ ಬದುಕಿನಲಿ ರವಿಯ ಬೆಳಕಿಲ್ಲ
ಕೂತಲ್ಲಿಂದ ಕದಲುವ ಮನಸ್ಸಿಲ್ಲ
ಕನಸುಗಳು ಮರಿ ಹಾಕುವ ಲಕ್ಷಣವಿಲ್ಲ
ಯಾರಿಗೆ ಯಾರೂ ಇಲ್ಲ ನನಗೆ ನಾನೇ ಎಲ್ಲಾ...

ನೆನಪುಗಳನ್ನು ಇಂದು ಕಾಯುವವರಿಲ್ಲ
ಅವುಗಳದ್ದೇ ಕಾರುಬಾರು ಮನದೂರಲೆಲ್ಲಾ
ದೇವರಿಲ್ಲದ ಗುಡಿಯು, ನಿರ್ಜಿವ ಸೂರಿರುವ ಊರು
ಇಂದು ಈ ಏಕಾಂಗಿಯ ಊರಾಗಿದೆ
ಯಾರಿಗೆ ಯಾರೂ ಇಲ್ಲ ನನಗೆ ನಾನೇ ಎಲ್ಲಾ...

ನಿಮ್ಮವ,
ರಾಘು.
('ಒಬ್ಬಂಟಿ'ಯಿಂದ 'ಏಕಾಂಗಿ'ಯಾಗಿ 'ಒಬ್ಬಂಟಿ'ಗಾಗಿ ಬರೆದ ಒಂದು ಸಣ್ಣ ಕವಿತೆ.)

21 comments:

ಶಿವಪ್ರಕಾಶ್ said...

wow.. beautiful lines from ಏಕಾಂಗಿ :)

Anonymous said...

very touching

malathi S

ಮನಸು said...

ತುಂಬಾ ಚೆನ್ನಾಗಿದೆ. ಏಕಾಂಗಿಯ ಒಂಟಿ ಕವಿತೆ ತುಂಬಾ ಇಷ್ಟವಾಯಿತು. ಮತ್ತೆ ಕಾರು ಬಾರು (ಕಾರುಬಾರು) ಒಂದೇ ಪದ ಅಲ್ಲವೆ..?
ಒಳ್ಳೆಯ ಕವನ ಮತ್ತಷ್ಟುಬರಲಿ!!!
ವಂದನೆಗಳು

Raghu said...

ಶಿವಪ್ರಕಾಶ್,
:) ಪ್ರತಿಕ್ರಿಯಿಸಿದಕ್ಕೆ ದನ್ಯವಾದಗಳು...

Malathi S,
Thank you...

ನಿಮ್ಮವ,
ರಾಘು.

Raghu said...

ಮೃದು ಮನಸ್ಸಿನ 'ಮನಸು'ರವರಿಗೆ,
ಮೆಚ್ಚುಗೆನು ಇಷ್ಟವಾಯಿತು. 'ಕಾರುಬಾರು' ವಂದೇ ಪದ. ಟೈಮಿಂಗ್ನಲ್ಲಾದ ತಪ್ಪು... ಇವಾಗ್ಲೇ ಸರಿಪಡಿಸುವೆ... ಪ್ರೋಸ್ಸಾಹ ಸದಾ ಇರಲಿ... ಧನ್ಯವಾದಗಳು...
ನಿಮ್ಮವ,
ರಾಘು.

ಸವಿಗನಸು said...

ರಾಘು,
ಸೊಗಸಾದ ಕವನ....
ಬರೆಯುತ್ತಾ ಇರಿ...

Raghu said...

ಸ್ನೇಹಜೀವಿ ಸವಿಗನಸುರವರಿಗೆ,
'ಮೌನದ ಪದಗಳು' ಬ್ಲಾಗಿಗೆ ಸ್ವಾಗತ.ಪ್ರೋಸ್ಸಾಹ ಸದಾ ಇರಲಿ.ಧನ್ಯವಾದಗಳು...
ನಿಮ್ಮವ,
ರಾಘು.

Nagashree said...

ನಿಜ,ಯಾರಿಗು ಯಾರಿಲ್ಲ ಅವರವರಿಗೆ ಅವರೇ ಎಲ್ಲ... ಯಾರೂ ಮಾತಾಡಿಸಲಿಲ್ಲ ಅಂತ ಒಂಟಿಯಾಗುವ ಮನಸ್ಸು,ಕೆಲವೊಮ್ಮೆ ಯಾರೂ ಮಾತಾಡಿಸದಂತೆ ಒಂಟಿಯಾಗಿರಬೇಕು ಅಂದುಕೊಳ್ಳುತ್ತದೆ,ಅದೇ ಅದರ ವೈಚಿತ್ರ್ಯ. ಚೆನ್ನಾಗಿದೆ,ಏಕಾಂಗಿಯ ಯಾತನೆಯನ್ನು ಬರವಣಿಗೆಯ ಮೂಲಕ ವ್ಯಕ್ತಪಡಿಸಿದ್ದಕ್ಕೆ ಧನ್ಯವಾದಗಳು.

Raghu said...

ನಾಗಶೀ,ನಿಮ್ಮ ಅನಿಸಿಕೆ ಪ್ರತಿಯೊಬ್ಬರಲ್ಲಿ ಇರುವ ಒಂದು ಗುಣ ಎನ್ನುವುದು ನನ್ನ ಅನಿಸಿಕೆ. ಅದರದೇ ಲೋಕದಲ್ಲಿ ಸ್ವಲ್ಪ ಹೊತ್ತು ಇದ್ರೆ ಮನಸ್ಸು ಸ್ವಲ್ಪ ತಿಳಿ ಆಗುತ್ತೆ. ಪ್ರೋಸ್ಸಾಹ ಸದಾ ಇರಲಿ. ನಿಮ್ಮ ಅಭಿಪ್ರಾಯ ತಿಳಿಸಿದಕ್ಕೆ ಧನ್ಯವಾದಗಳು.
ನಿಮ್ಮವ,
ರಾಘು.

ಚುಕ್ಕಿಚಿತ್ತಾರ said...

ಒಬ್ಬ೦ಟಿಗೆ ಎಲ್ಲರೂಇದ್ದಾರೆ. ಯಾಕಿಲ್ಲ....? ಬಸ್ಸಿನಲ್ಲಿ ಒಬ್ಬರೇ ಪ್ರಯಾಣ ಮಾಡುತ್ತಿದ್ದೀರ, ಏನೋ ಹಾರ್ಟ್ ಅಟ್ಯಾಕ್ ಆಯಿತು. ಅ೦ದುಕೊಳ್ಳಿ.ಅಲ್ಲಿದ್ದ ಅಪರಿಚಿತ ಬ೦ಧುಗಳೇ ಅಲ್ಲವೇ...ಸ್ಪ೦ದಿಸುವುದು....? ಒಬ್ಬ೦ಟಿ ಅ೦ತರ್ಮುಖಿಯಾಗುವುದು ತರವಲ್ಲ..

Raghu said...

ಕೆಲವು ಬಾರಿ ನಾವು ತುಂಬಾ ನಮ್ಮದೇ ಲೋಕದಲ್ಲಿ ಇರಲಿಕ್ಕೆ ಪ್ರಯತ್ನ ಪಡ್ತೇವೆ. ಯಾಕೆ ಅಂತ ನಮ್ಮನ್ನ ನಾವು ಕೆಲ್ಕೊಂದ್ರೆ ಉತ್ತರ ಇರಬಹುದೇನೋ. 'ಅಪರಿಚಿತ ಬ೦ಧುಗಳೇ ಅಲ್ಲವೇ...ಸ್ಪ೦ದಿಸುವುದು', ಒಪ್ಪಿಕೊಳ್ತೇನೆ ಆದರೆ ಅದು ಮಾನವೀಯತೆ, ನಾವು ಅದನ್ನ ಮರೆಯಬಾರದು. ಅದಕ್ಕೂ ಒಂದು Example ಇದೆ, ಹಿಂದೊಮ್ಮೆ ನಾನು ಬಸ್ಸಿನಲ್ಲಿ ಮನೆಯವರಿಂದ ತಪ್ಪಿಹೋದ ಹುಡುಗನ್ನ ಮತ್ತೆ ಪೋಲಿಸೆನರ ಮೂಲಕ ಅದೇ ಮನೆಗೆ ತಲುಪಿಸಿದ್ದೇನೆ. ಇದು ಮನವಿಯತೆಯ ಸ್ಪಂದನ ಅಲ್ಲವೇ?...'ಒಬ್ಬ೦ಟಿ ಅ೦ತರ್ಮುಖಿಯಾಗುವುದು ತರವಲ್ಲ' ಸತ್ಯವಾದ ಮಾತು. ಮಾತು ಆಡದೇ ಜೀವನ ಹೇಗೆ ಸಾಗಿಸೋದು.. ಅಬ್ಬಾ!!...

ಒಬ್ಬಂಟಿಯ ಭಾವನೆಯ ಬವಣೆ ವಿಚಿತ್ರ.ನಿಮಗೂ ಕೆಲವೊಮ್ಮೆ ಅನಸಿರಬೇಕಲ್ಲವೇ?
ಒಬ್ಬಂಟಿಯ ಮನಸ್ಸನ್ನ ಆರಿಯುವ ಪ್ರಯತ್ನವೇ ಈ 'ಏಕಾಂಗಿ' ಹಾಗಂತ ನಾನು 'ಏಕಾಂಗಿ' ಅಲ್ಲ. ನಮ್ಮ ದುನಿಯಾದಲ್ಲಿ ತುಂಬಾ ಜನ ನಮ್ಮವರೂ ಇದ್ದಾರೆ. ಬ್ಲಾಗ್ ದುನಿಯಾದಲ್ಲಿ ನಿಮ್ಮೆಲ್ಲರ ಪ್ರೋಸ್ಸಹ ಇರುವಾಗ ನಾನು ಒಂಟಿಯಾಗಲು ಹೇಗೆ ಸಾದ್ಯ...?
ಧನ್ಯವಾದಗಳು.
ನಿಮ್ಮವ,
ರಾಘು.

ದೀಪಸ್ಮಿತಾ said...

ಚೆನ್ನಾಗಿದೆ ಕವನ

Raghu said...

Deepasmitha, ಧನ್ಯವಾದಗಳು.
ನಿಮ್ಮವ,
ರಾಘು.

ಜಲನಯನ said...

ಒಮ್ಮೊಮ್ಮೆ ಒಬ್ಬಂಟಿ ಎನಿಸುವುದು ಮತ್ತು ಅದರ ಬಗ್ಗೆ ಯೋಚಿಸಿದಾಗ..ನಿಮ್ಮ ಬಗ್ಗೆ ನೀವು ಗಮನಿಸಿಕೊಳ್ಳುತ್ತೀರಿ..ಎಲ್ಲಿ ತಪ್ಪಾಯಿತು ಅಂತ?/ ಇದು ಸ್ವವಿಮರ್ಶೆಯ ಸದವಕಾಶ...ಚನ್ನಾಗಿದೆ ನಿಮ್ಮ ಮನದ ಮಾತು

Anonymous said...

sakaat aagi ide

Raghu said...

ಜಲನಯನ,
ಒಬ್ಬಂಟಿ ಯಾಕೆ ಆದೆ ಯಾ ಎಲ್ಲಿಂದ ಅದು ಹುಟ್ಟಿತು... ಇಲ್ಲಿ ಸ್ವವಿಮರ್ಶೆಯ ಆಗತ್ಯ ಇದೆ ಎನ್ನುದು ಸತ್ಯವಾದ ಮಾತು... ಆಗ ತಾನೆ ಮತ್ತೊಮ್ಮೆ ಅಂತ ನದಿಯಲ್ಲಿ ಬೀಳುವಾಗ.... :)
ದನ್ಯವಾದಗಳು..
ಶ್ರೀ,
ಮೆಚ್ಚುಗೆಗೆ ಧನ್ಯವಾದಗಳು..
ನಿಮ್ಮವ,
ರಾಘು.

Unknown said...

Hi....
Good maga... but typing swalpa sudharisbeku.... tumba tappu madta iddeeya.... urgetalli baribeku anta oddadi quality hal madkobeda....

Urs,
Giri

ಶ್ರೀಧರ said...

ನಿನ್ನೆ ಇದ್ದವರು ಇಂದಿಲ್ಲ ಇಂದಿರುವವರು ನಾಳೆ ಎಲ್ಲೊ ,,, ಬಾಳೆಂಬ ಆಟದಲಿ ಎಲ್ಲರೂ ಏಕಾಂಗಿಗಳು

Raghu said...

Giriiii,
neenu helidage. upcoming post nalli will put more effort to make it better. Ensure you that typo error also be reduced.
keep reading..
Raaghu.

ಶ್ರೀಧರ,
ಮೌನದ ಪದಗಳ ಬ್ಲಾಗ್ ಗೆ ಸ್ವಾಗತ.ಎಲ್ಲರೂ ಒಂದಲ್ಲ ಒಂದು ರೀತಿಯಿಂದ ಏಕಾಂಗಿಗಳು. ಸತ್ಯವಾದ ಮಾತು.
ಧನ್ಯವಾದಗಳು.
ನಿಮ್ಮವ,
ರಾಘು.

Unknown said...

ರಾಘು ಅಣ್ಣಾ ನಿಮ್ಮ ಕವಿತೆ ಓದುತ್ತಿದ್ದರೆ ನನ್ನ ಭಾವನೆಗಳೇ ಪದಗಳ ಮೂಲಕ ಆ ಕವಿತೆ ಆಗಿರಬಹುದು ಅನಿಸುತ್ತಿದೆ.. ಕಣ್ಣಂಚು ಒದ್ದೆಯಾಗುತ್ತದೆ..

Hemanth said...

Super