Tuesday, November 17, 2009

ನನ್ನಲಿ ನೀನು

ಇರು ನೀನು ಇರು ನೀನು ನನ್ನಲಿ ನನ್ನಯ ಮನದಲಿ ಇಂದು ಮುಂದು ಎಂದೆಂದು
ಬಾ ನೀನು ನನ್ನಯ ಕನಸಿನಲಿ ಪ್ರತಿ ದಿನವೂ ಎಂದೆಂದೂ
ನೋವಿರಲಿ ನಲಿವಿರಲಿ ಇರು ನೀನು ಇರು ನೀನು ಸದಾ ನನ್ನಲ್ಲಿ ನೀನು
ಪ್ರೀತಿಯ ತಾ ನೀನು ಎದೆಯಲಿ ಬೆಳಗು ನೀನು
ಪ್ರಾಣಕೆ ಸೂರಾಗಿ ಇರು ನೀನು

ಇರು ನೀನು ಇರು ನೀನು ನನ್ನಲಿ ನನ್ನಯ ಮನದಲಿ ಇಂದು ಮುಂದು ಎಂದೆಂದು
ಬಾ ನೀನು ನನ್ನಯ ಕನಸಿನಲಿ ಪ್ರತಿ ದಿನವೂ ಎಂದೆಂದೂ
ಇರು ನೀನು ಇರು ನೀನು ಸದಾ ನನ್ನಲಿ ನೀನು

ಬಾವಕೆ ರೆಕ್ಕೆಯಾಗಿ ಇರು ನೀನು, ಸ್ನೇಹಕೆ ಹಸ್ತವಾಗಿ ಇರು ನೀನು
ಗುಡಿಯಲಿ ದೇವತೆಯಾಗಿ ಇರು ನೀನು
ಇರು ನೀನು ಇರು ನೀನು ಸದಾ ನನ್ನಲಿ ನೀನು
ಬಾಳಿಗೆ ದಾರಿಯಾಗಿ ಇರು ನೀನು, ದಾರಿಗೆ ಹೂವಾಗಿ ಇರು ನೀನು
ಹೂವಿಗೆ ದುಂಬಿಯಾಗಿ ಇರು ನೀನು
ಇರು ನೀನು ಇರು ನೀನು ಸದಾ ನನ್ನಲಿ ನೀನು

ಸಂಗೀತಕೆ ಸ್ವರವಾಗಿ ಇರು ನೀನು, ಮಾತಿಗೆ ಅರ್ಥವಾಗಿ ಇರು ನೀನು
ಕಾಡಲಿ ಜಿಂಕೆಯಾಗಿ ಇರು ನೀನು, ನಾಡಲಿ ಹರಿಯುವ ನದಿಯಾಗಿ ಇರು ನೀನು
ಇರು ನೀನು ಇರು ನೀನು ಸದಾ ನನ್ನಲಿ ನೀನು
ನಸುಕಿಗೆ ವಸಂತವಾಗಿ ಇರು ನೀನು, ಇರುಳಿಗೆ ಶಕ್ತಿಯಾಗಿ ಇರು ನೀನು
ಶಕ್ತಿಗೆ ಪ್ರೇರಣೆಯಾಗಿ ಇರು ನೀನು
ಇರು ನೀನು ಇರು ನೀನು ಸದಾ ನನ್ನಲಿ ನೀನು

ಇರು ನೀನು ಇರು ನೀನು ನನ್ನಲಿ ನನ್ನಯ ಮನದಲಿ ಇಂದು ಮುಂದು ಎಂದೆಂದು
ಬಾ ನೀನು ನನ್ನಯ ಕನಸಿನಲಿ ಪ್ರತಿ ದಿನವೂ ಎಂದೆಂದೂ
ಇರು ನೀನು ಇರು ನೀನು ಸದಾ ನನ್ನಲಿ ನೀನು

ನಿಮ್ಮವ,
ರಾಘು.

28 comments:

ಸವಿಗನಸು said...

ರಘು,
ಎಲ್ಲೂ ಹೋಗದೆ ಸದಾ ಕಾಲ ನಿಮ್ಮಲ್ಲಿ ಇರುತ್ತಾರೆ....
ಬಹಳ ಚೆನ್ನಾಗಿದೆ....
ಸೊಗಸಾದ ಕವನಕ್ಕೆ ಅಭಿನಂದನೆಗಳು...

ದಿನಕರ ಮೊಗೇರ said...

ರಘು ಸರ್,
ಕವನ ಸೊಗಸಾಗಿದೆ.... ನಿಮ್ಮಲ್ಲೇ ಇರುತ್ತಾರೆ .....

ಚುಕ್ಕಿಚಿತ್ತಾರ said...

ಅಷ್ಟೊ೦ದು ಕೇಳಿಕೊ೦ಡಾಗ ಇರದೇ ಎಲ್ಲಿಗೆ ಹೋಗುತ್ತಾರೆ ಬಿಡಿ..

ನಿಮ್ಮಲ್ಲೇ ಇರುತ್ತಾರೆ.....

ಕವನ ಚೆನ್ನಾಗಿದೆ.

Anonymous said...

tumbaa chennagide..:):)

ಶಿವಪ್ರಕಾಶ್ said...

ಇಷ್ಟು ಹೇಳಿದ ಮೇಲೆ ಅದೆಲ್ಲಿಗೆ ಹೋಗ್ತಾರೆ ಬಿಡಿ... ನೋಡೇಬಿಡೋಣ....
ಚನ್ನಾಗಿದೆ.... :)

ಸಾಗರದಾಚೆಯ ಇಂಚರ said...

ರಘು
ಕವನ ಸೂಪರ್
ನನ್ನ, ನಿನ್ನ, ನೀನು ಪ್ರಯೋಗ ತುಂಬಾ ಚೆನ್ನಾಗಿದೆ

Prabhuraj Moogi said...

ನೀನು... ನಾನು... ನನ್ನಲಿ, ನನ್ನ... ಹೀಗೆ ನಿಮ್ಮ ಕವನ ಸುಂದರವಾಗಿ ಮೂಡಿಬಂದಿದೆ, ಹೀಗೆ ಬರೆಯುತ್ತಿರಿ...

Raghu said...

ಸವಿಗನಸುರವರೆ,
ಕವನಗಳಲ್ಲಿ ಆಗಾಗ ಬರ್ತಾ ಇರ್ತಾರೆ. ಎಲ್ಲಿ ಹೋಗ್ತಾರೆ ಖಂಡಿತ ಇದ್ದೆ ಇರ್ತಾರೆ. ಹಹಃ.. ಕಾಮೆಂಟ್ ನೋಡಿ ಖುಷಿ ಆಯಿತು. ನಿಮ್ಮ ಒಂದು ಕವನ ಲೈನ್ ಅನ್ನು ಮುಂದುವರಿಸುವ ಅಂತ ಅನ್ನಿಸಿತು.
"ಚಿಂತಿಸಿದರೆ ಇನ್ನು ಹೆಚ್ಚು
ಹಿಡಿಯುವುದು ಮನಕೆ ಹುಚ್ಚು" ಬರುತ್ತಿದೆಯೆಲ್ಲ ಐಡಿಯಾಗಳು ಇನ್ನೂ ಹೆಚ್ಚು ಹೆಚ್ಚು..

ಧನ್ಯವಾದಗಳು...
ನಿಮ್ಮವ,
ರಾಘು.

Raghu said...

ದಿನಕರ ಮೊಗೇರ ಅವರೇ,
ಕವನ ಮೆಚ್ಚಿದಕ್ಕೆ ಧನ್ಯವಾದಗಳು...ಇರಲಿ ನಂಗು ಖುಷಿ ಆಗುತ್ತೆ... ಅಲೆಗಳಿಗೂ ನಾನ್ ಆಮೇಲೆ ಹೇಳಬಹುದಲ್ಲ...
ನಿಮ್ಮವ,
ರಾಘು.

Raghu said...

ಚುಕ್ಕಿಚಿತ್ತಾರ ಅವರೇ,
ಹಾಗಂತಿರ ಸರಿ ನೋಡೋಣವಂತೆ.. ಹ್ಹ ಹ್ಹ ಹ್ಹ.. ಚೆನ್ನಾಗಿದೆ ನಿಮ್ಮ ಕಾಮೆಂಟ್...
ದನ್ಯವಾದಗಳು
ನಿಮ್ಮವ,
ರಾಘು.

Raghu said...

ಆಕಾಶಬುಟ್ಟಿ ಅವರೇ,
ಧನ್ಯವಾದಗಳು... ನಮ್ಮ ಬ್ಲಾಗ್ ಕಡೆ ಬರ್ತಾ ಇರಿ..
ನಿಮ್ಮವ,
ರಾಘು.

Raghu said...

ಶಿವಪ್ರಕಾಶ್,
ಹೌದೌದು.. ನೋಡಿಯೇಬಿಡೋಣ.. ಅಲ್ವ?... ಧನ್ಯವಾದಗಳು...
ನಿಮ್ಮವ,
ರಾಘು.

Raghu said...

ಸಾಗರದಾಚೆಯ ಇಂಚರ,
ಧನ್ಯವಾದಗಳು... ನಾ ನೀನು ನನ್ನ ಪ್ರಯೋಗ ಒಳ್ಳೆಯ ರೀತಿಯಲ್ಲಿ ಬಂದಿದ್ದಕ್ಕೆ ನಂಗು ಖುಷಿ ಆಯಿತು... ಪ್ರೋಸ್ಸಾಹ ಯಾವಾಗಲು ಇರಲಿ..
ಇರು ನೀನು ಇರು ನೀನು ನಮ್ಮಲಿ ನಮ್ಮ ಬ್ಲಾಗಲಿ... :)
ನಿಮ್ಮವ,
ರಾಘು.

Raghu said...

Prabhuraj Moogi ಅವರೇ,
ಬ್ಲಾಗ್ಗಿಗೆ ಸ್ವಾಗತ ಸರ್. ನಿಮ್ಮ ಪ್ರೋಸ್ಸಹ ಸದಾ ಹೀಗೆ ಇರಲಿ. ಇರು ನೀನು ಅನ್ನೋದು ಒಂದು ನೀ.. ನಾ.. ನೀನು.. ನನ್ನ..ಗಳ ಪ್ರಯೋಗ.ಇನ್ನೂ ಬೇರೆ ಬೇರೆ ರೀತಿಯಲ್ಲಿ ಬರೆಯುವ ಪ್ರಯತ್ನ ಮಾಡಬೇಕಾಗಿದೆ. ಮೆಚ್ಚುಗೆಗೆ ಧನ್ಯವಾದಗಳು...
ನಿಮ್ಮವ,
ರಾಘು.

Anonymous said...

Raaghu
chennagide kavana. nimage shubha haaraikegaLu.
:-)
malathi S

Raghu said...

ಮಾಲತಿ ಅವರೇ,
ನಿಮ್ಮ ಪ್ರೋಸ್ಸಹ ನಮಗೆ ಊಸ್ಸಾಹ. ಧನ್ಯವಾದಗಳು... :)
ನಿಮ್ಮವ,
ರಾಘು.

Snow White said...

ತುಂಬ ಚೆನ್ನಾಗಿದೆ..ಸದಾ ಅವರು ನಿಮ್ಮ ಜೊತೆಯೇ ಇರಲಿ ಎಂದು ಆಶಿಸುವೆ :)

Raghu said...

ನೆನಪಿನ ಸುಮಾ ಅವರೇ,
ಹ್ಹ ಹ್ಹ ಹ್ಹ ಹ್ಹ... ಧನ್ಯವಾದಗಳು.. ಅವರು ಇವರು ಅಂತ ಯಾರು ಸದ್ಯ ಇಲ್ಲ... ಎಂಟ್ರಿ ಕೊಟ್ಟ ಮೇಲೆ 'ಇರು ನೀನು' ಅಂತ ನಾನು ಅವರಿಗೆ ಹೇಳಬಹುದಲ್ಲ... :)
ನಿಮ್ಮವ,
ರಾಘು.

ಮನಸು said...

ರಾಘು,
ತಡವಾದ ಅನಿಸಿಕೆಗೆ ಕ್ಷಮೆಇರಲಿ, ನಿಮ್ಮ ಕವನ ಮುಖೇನ ಇರು ಎಂದು ಇಷ್ಟು ಹೇಳಿದರೆ ಕೇಳಿದವರು ಇರದೇ ಇರುತ್ತಾರೆಯೇ..ಹಹ ತುಂಬಾ ಚೆನ್ನಾಗಿದೆ

pdkamath said...

Hi Nice posts.Here is a link for a Kannada website
http://kannadavedike.net/
Thanks and happy blogging

ಜಲನಯನ said...

ಇರು ನೀನು..ಎನ್ನುವ ನಿಮ್ಮ ಮಾತು..ಹೇಗಿರಬೇಕೆಂದೂ ಹೇಳುತ್ತದೆ. ರಾಘು ...ಹಾಗೇ
ಎಲ್ಲಿರಬೇಕೆಂದೂ ಹೇಳುತ್ತದೆ....ನಿಜವಾಗಿಯೂ ನೀವು ಇರಬೇಕೆನ್ನುವವರ ಪ್ರತಿಸ್ಠಾಪನಾ ತಾಣಗಳ ವೈಶಿಷ್ಠ್ಯ ಬಹಳ ಅತ್ಭುತವಾಗಿ ಮೂಡಿದೆ...

Raghu said...

ಮನಸು,
ಅಲ್ವ ಮತ್ತೆ.. ಕೇಳಿದ ಮೇಲೆ ಹೋಗಲಿಕ್ಕೆ ಮನಸ್ಸಾದ್ರು ಹೇಗೆ ಬರುತ್ತೆ ನೀವೇ ಹೇಳಿ.. :) ಧನ್ಯವಾದಗಳು..
ನಿಮ್ಮವ,
ರಾಘು.

Raghu said...

pdkamath,
Welcome to Mounada Padagalu...Thank you sir.. happy reading.. keep coming...
Raaghu

Raghu said...

ಜಲನಯನ,
ಪ್ರತಿಕ್ರಿಯೆಗೆ ಧನ್ಯವಾದಗಳು... :) ನಿಜ, 'ಇರು ನೀನು' ಎನ್ನುವ ಮಾತಿಗೆ ಒಂದು ಒಳ್ಳೆಯ ಕಲ್ಪನೆ ಸಂಗಾತಿಯಾಗಿದೆ ಅಲ್ಲವೇ...
ನಿಮ್ಮವ,
ರಾಘು.

Ittigecement said...

ರಾಘು...

ಬಹಳ ಸೊಗಸಾದ ಕವನ...
ಭಾವಗಳು ಚೆನ್ನಾಗಿದೆ...
ಪ್ರಾಸ ಬದ್ಧವಾಗಿವೆ..

ಚಂದದ ಕವಿತೆಗೆ ಅಭಿನಂದನೆಗಳು...

Dileep Hegde said...

ಸುಂದರ ಕವಿತೆ..

Raghu said...

ದಿಲೀಪ್, ಪ್ರಕಾಶಣ್ಣ ಧನ್ಯವಾದಗಳು..
ನಿಮ್ಮವ,
ರಾಘು.

ranjith said...

:)