Tuesday, December 1, 2009

ಸ್ನೇಹ - ಒಂದು ಆತ್ಮ ಎರಡು ಮನಸ್ಸು

ಸ್ನೇಹ ಬೆತ್ತಲೆ
ಹೋಗಲಾಡಿಸುವುದು ಮನದ ಕತ್ತಲೆ
ಸ್ನೇಹ ಆಗಸದೆತ್ತರಕೆ ಏರಲು ನೆರವಾಗುವ ಮೋಡದ ಕೈ
ಜಾರಿ ಬಿದ್ದರೆ ಕಾಪಾಡುವ ಭೂತಾಯಿಯ ಅಂಗೈ

ಕಂಡ ಕನಸಿಗೆ ಸ್ನೇಹ ಕನ್ನಡಿ
ನೊಂದ ಮನಸಿಗೆ ಸ್ನೇಹ ಸಾಂತ್ವನದ ಮುನ್ನುಡಿ
ತಪ್ಪು ದಾರಿಗೆ ಸ್ನೇಹ ಸನ್ಮಾರ್ಗದ ದಾರಿದೀಪ
ಸಂತಸದ ಸಂಭ್ರಮಕೆ ಸ್ನೇಹ ಸಪ್ತಸಾಗರ

ಒಂದೇ ಆತ್ಮದ ಎರಡು ಮನಸ್ಸು ಸ್ನೇಹ
ಎರಡು ಮನಸ್ಸಿನ ಒಂದೇ ಕನಸು ಸ್ನೇಹ
ಬೇಕಂದಾಗ ಸಹಾಯ ಮಾಡುವ ಸ್ನೇಹ ಹಸ್ತ
ದಣಿವಾದಾಗ ನೆರಳು ನೀಡುವ ಸ್ನೇಹ ವ್ರಕ್ಷ

ಸ್ನೇಹ ಬೆತ್ತಲೆ
ಹೋಗಲಾಡಿಸುವುದು ಮನದ ಕತ್ತಲೆ...

ನಿಮ್ಮವ,
ರಾಘು.

23 comments:

ಚುಕ್ಕಿಚಿತ್ತಾರ said...

ಸ್ನೇಹವನ್ನ ಒಳ್ಳೆಯ ಭಾವದಲ್ಲಿ , ಅಕ್ಷರಗಳಲ್ಲಿ ಹಿಡಿದಿಟ್ಟಿದ್ದೀರ.

ಒಳ್ಳೆಯ ಕವನ.....

ಸವಿಗನಸು said...

ರಘು,
"ಎರಡು ಮನಸ್ಸಿನ ಒಂದೇ ಕನಸು ಸ್ನೇಹ"
ಚೆಂದದ ಸಾಲು...
ಸ್ನೇಹದ ಮಜಲುಗಳನ್ನು ಚೆನ್ನಾಗಿ ಹೆಣೆದಿದ್ದೀರ.....
ಅಭಿನಂದನೆಗಳು.....

ಶಿವಪ್ರಕಾಶ್ said...

ರಘು,
'ಸ್ನೇಹ'ದ ಬಗ್ಗೆ ಬರೆದ ನಿಮ್ಮ ಈ ಕವನ, ತುಂಬಾ ಚನ್ನಾಗಿದೆ ರೀ.
ಅಂದಹಾಗೆ 'ಸ್ನೇಹ' ನನ್ನ ಎಲ್ಲ ಲೇಖನಗಳಲ್ಲಿ ಬರುವ ಸ್ತ್ರೀ ಪತ್ರದಾರಿಯ ಹೆಸರು... ಹ್ಹಾ ಹ್ಹಾ ಹ್ಹಾ...

ಸಾಗರದಾಚೆಯ ಇಂಚರ said...

ರಘು
ಸ್ನೇಹದ ಬಗೆಗಿನ ಸಾಲುಗಳು ತುಂಬಾ ಸುಂದರವಾಗಿವೆ
ಪ್ರಾಸಬದ್ದವಾದ ಕವನ ಮುದ ನೀಡಿತು

Snow White said...

ಸ್ನೇಹದ ಅರ್ಥವನ್ನು ಮಹತ್ವವನ್ನು ಎಷ್ಟು ಚೆನ್ನಾಗಿ ವರ್ಣಿಸಿದ್ದಿರಿ ..ತುಂಬ ತುಂಬ ಚೆನ್ನಾಗಿದೆ ...ಈ ಕವಿತೆಯಿಂದ ನಿಮ್ಮ ಸ್ನೇಹಿತರು ನಿಜಕ್ಕೂ ಖುಷಿಪಟ್ಟಿರುತಾರೆ ... :) :)

ಆನಂದ said...

"ಸ್ನೇಹ ಬೆತ್ತಲೆ"
ಯಾರ್ರೀ ಅದು ಸ್ನೇಹ..!

ಹಾಗೇ ತಮಾಷೆಗೆ ಅಂದೆ ಅಷ್ಟೇ, ತಪ್ಪು ತಿಳೀಬೇಡಿ.. :)

ನಿಜ, ನೊಂದು ಬೇಜಾರಾದಾಗ ಒಂದ್ನಾಕ್ ಜನ ಫ್ರೆಂಡ್ಸ್ ಉಗ್ದಾಗಲೇ ನೆಟ್ಟಗಾಗೋದು.
( ನನ್ನ ಫ್ರೆಂಡ್ಸ್ ಸಮಾಧಾನ ಮಾಡೋ ರೀತಿ ಹಾಗಿರುತ್ತೆ! )

ಮುಸ್ಸ೦ಜೆ ಇ೦ಪು said...

ಸ್ನೇಹವನ್ನು ಸು೦ದರ ಸಾಲುಗಳಲ್ಲಿ ಹಿಡಿದಿಟ್ಟಿದ್ದೀರ. ತು೦ಬಾ ಇಷ್ಟ ಆಯ್ತು :)

ದಿಲೀಪ್ ಹೆಗಡೆ said...

ಚೆನ್ನಾಗಿದೆ.. :)

Anonymous said...

Three cheers to 'Sneha"
nice lines da
:-)
malathi S

Creativity!! said...

ಬಹಳ ಸುಂದರವಾದ ಸ್ನೇಹದ ಕವನ :) :)

Ranjita said...

ರಘು ಸರ್ ,
ತುಂಬಾ ಚೆನ್ನಾಗಿದೆ ಕವನ .. ಹೀಗೆ ಬರ್ತಾ ಇರಲಿ :)

ತೇಜಸ್ವಿನಿ ಹೆಗಡೆ- said...

ಸ್ನೇಹ ನಿಸ್ವಾರ್ಥವಾಗಿರುವಷ್ಟೂ ಹೊತ್ತು ಬಲು ಸುಂದರವಾಗಿರುವುದು. ಅದೇ ಸ್ನೇಹಕ್ಕೆ ಕಲ್ಮಶತೆ ಬೆರೆತರೆ ಮನವೆಲ್ಲಾ ವಿಷತುಂಬುವುದು.

ನಿಶ್ಕಲ್ಮಶ ಸ್ನೇಹದ ಪರಿಭಾಷೆಯನ್ನು ಸರಳ ಸುಂದರ ಕವನದ ಮೂಲಕ ಹೇಳಿದ್ದೀರಿ. ಚೆನ್ನಾಗಿದೆ.

ಸಿಮೆಂಟು ಮರಳಿನ ಮಧ್ಯೆ said...

ರಾಘು...

ನಿಮ್ಮ ಕವನ ಓದಿ ನನಗೆ ವಿ.ಸಿ.ಯವರ ಕವಿತೆ ನೆನಪಾಯಿತು.

"ಗೆಳೆತನವೆ ಇಹಲೋಕಕಿರುವ ಅಮೃತ
ಅದನುಳಿದರೇನಿಹುದು ಜೀವನ್ಮೃತ.."

ಮನದ ಕತ್ತಲೆ ಓಡಿಸುವ ಸ್ನೇಹ ಬಲು ದೊಡ್ಡದು...

ಚಂದದ ಕವಿತೆಗೆ ಅಭಿನಂದನೆಗಳು..

Raghu said...

ಚುಕ್ಕಿಚಿತ್ತಾರ ಅವರೇ... :)
ಹತ್ತಿರದ ಸ್ನೇಹಿತರಾಗ್ಲಿಕ್ಕೆ ಯಾ ಮಾಡ್ಕೊಲ್ಲಿಕ್ಕೆ ಸ್ವಲ್ಪ ಜಾಸ್ತಿ ದಿನನೇ ಬೇಕು ಅಲ್ವ... ಮನಸ್ಸಿನ ಬಾವನೆಗಳು ತುಂಬಾ ಸೂಕ್ಷ್ಮ ಅಲ್ಲವೇ...?
ಧನ್ಯವಾದಗಳು...

ಸವಿಗನಸು.... :)
ನಿಮಗೆ ಇಷ್ಟವಾದರೆ ನಮಗೆ ಖುಷಿ..ನಿಮ್ಮ ಪ್ರೋಸ್ಸಹ ಹೀಗೆ ಇರಲಿ...ಧನ್ಯವಾದಗಳು...

ಶಿವಪ್ರಕಾಶ್... :)
ಹ್ಹ ಹ್ಹ ಹ್ಹ.. ಹೌದಲ್ವ.. ಯಾಕೆ ಹಾಗೆ 'ಸ್ನೇಹ' ಜಪ...? ಮೆಚ್ಚುಗೆಗೆ ಧನ್ಯವಾದಗಳು...

ನಿಮ್ಮವ,
ರಾಘು.

Raghu said...

ಗುರು ಸರ್, :)
ತೇಜಸ್ವಿನಿ ಅವರು ಹೇಳಿದ ಹಾಗೆ "ಸ್ನೇಹ ನಿಸ್ವಾರ್ಥವಾಗಿರುವಷ್ಟೂ ಹೊತ್ತು ಬಲು ಸುಂದರವಾಗಿರುವುದು"... ಮೆಚ್ಚುಗೆಗೆ ಧನ್ಯವಾದಗಳು...

ನೆನಪು, :)
ಸ್ನೇಹ ಎಷ್ಟು ವರ್ಷದಿಂದ ಇದೆ ಎನ್ನುವುದು ಮುಖ್ಯವಲ್ಲ... ಸ್ನೇಹಿತ/ಸ್ನೇಹಿತೆ ಯಾ ಮನಸ್ಸನ್ನು ತಿಲ್ಕೊಂಡಿದ್ದೇವ ಅಥವಾ ಅವರು ನಮ್ಮನು ಹೇಗೆ ಅರ್ಥ ಮಾಡ್ಕೊಂಡಿದ್ದಾರೆ ಎನ್ನುವುದು ಮುಖ್ಯ ಅಲ್ಲವೇ..? ನನ್ನ ಸ್ನೇಹಿತರಿಗೆ ಕವನ ತುಂಬಾ ಖುಷಿ ಕೊಟ್ಟಿದೆ... ನನ್ನವರು ಅಂತ ಸ್ವಲ್ಪ ಮಂದಿ ಸ್ನೇಹಿತರಿದ್ದಾರೆ.. ಅವರು ನಾನು ತಪ್ಪು ಮಾಡಿದಾಗ ಕಿವಿ ಹಿಂಡಿ ಬುದ್ದಿ ಹೇಳ್ತಾರೆ.. ಒಳ್ಳೇದು ಮಾಡಿದ್ದರೆ ಬೆನ್ನು ತಟ್ಟಿ ಪ್ರೋಸ್ಸಹಿಸುತ್ತಾರೆ... ಅವರಹಾಗೆ ನಾನು ಕೂಡ... ಮೊದಲೇ ನನ್ನ ಮೆಮೊರಿ ಸ್ವಲ್ಪ ಜಾಸ್ತಿ... ಎಲ್ಲವನ್ನು ನೆನಪಿನಲ್ಲಿ ಇತ್ಕೊಲ್ತೇನೆ... :)
ಅವರೆನದ್ರು ಹೇಳಿದರೆ ಕೆಲವೊಮ್ಮೆ ಸಿಟ್ಟು ಮಾಡ್ಕೊಂಡಿದ್ದೇನೆ... ಆದರೆ ಅದು ಸ್ವಲ್ಪ ಹೊತ್ತು ಮಾತ್ರ.. ಏನೇ ಅಗಲಿ ಅವರುಗಳು ನನ್ನ ಸ್ನೇಹಿತರಲ್ಲವೇ..!!

ಆನಂದ ಅವರೇ,
ನಿಮ್ಮ ಕಾಮೆಂಟ್ ನೋಡಿ ನಗು ತಡ್ಕೊಲ್ಲಲಿಕ್ಕೆ ಆಗ್ತಾ ಇಲ್ಲ... ಪರವಾಗಿಲ್ಲ.. :) ಹೌದು ಕೆಲವು ಸಲ ಸ್ನೇಹಿತರೆ ನಮಗೆ ಎಲ್ಲಾ ಆಗ್ತಾರೆ ಅಲ್ವ... ಧನ್ಯವಾದಗಳು.. ನಿಮ್ಮ ಪ್ರೋಸ್ಸಹ ನಮಗೆ ಉಸ್ಸಹ!!

ನಿಮ್ಮವ,
ರಾಘು.

Raghu said...

ಪರಮ್....
ನಿಮ್ಮ ಕಾಮೆಂಟ್ ನೋಡಿ ಖುಷಿ ಆಯಿತು... ಪ್ರೋಸ್ಸಹ ಹೀಗೆ ಇರಲಿ ಪರಮ್...
ಧನ್ಯವಾದಗಳು....

ದಿಲೀಪ್ ಹೆಗಡೆ,
ತುಂಬಾ ತುಂಬಾ ಧನ್ಯವಾದಗಳು... :)

ಮಾಲತಿ ಎಸ್,
ನನ್ನ ಕಡೆಯಿಂದ cheers to 'Sneha"... :) ಕಾಮೆಂಟ್ ನೋಡಿ ಖುಷಿ ಖುಷಿ ಆಗಿದೆ..... ಧನ್ಯವಾದಗಳು... :)

ನಿಮ್ಮವ,
ರಾಘು.

ದಿನಕರ ಮೊಗೇರ.. said...

ರಘು,
ತುಂಬಾ ಚೆನ್ನಾಗಿದೆ, ಸ್ನೇಹದ ವರ್ಣನೆ..... ಸ್ನೇಹ ಎಲ್ಲರ ಜರೂರತ್ತು..... ಇದನ್ನ ಬಿಟ್ಟು ಏನಿಲ್ಲ..... ಇದೆ ಎಲ್ಲ....

Raghu said...

Creativity,
ಧನ್ಯವಾದಗಳು... ಸ್ನೇಹ ಯಾವಾಗಲು ತುಂಬಾ ಸುಂದರ ಅಲ್ವ.. ಅದಕ್ಕೆ ತಕ್ಕ ಹಾಗೆ ಕವನ ಇರಬೇಕಲ್ವೇ.. :)

ರಂಜಿತ ಅವರೇ,
ನಿಮ್ಮ ಕಾಮೆಂಟ್ ಮೂಲಕ ನೀಡಿದ ಪ್ರೋಸಹ ನನಗೆ ಖುಷಿ ಕೊಟ್ಟಿದೆ... ಬರೆಯುವ ಪ್ರಯತ್ನ ನನ್ನಿಂದ ಖಂಡಿತ ಆಗ್ತದೆ... ಧನ್ಯವಾದಗಳು..

ತೇಜಸ್ವಿನಿ ಅವರೇ,
ನಿಮ್ಮ ಮಾತು ನೂರಕ್ಕೆ ನೂರು ಸತ್ಯ...! ಸ್ನೇಹ ಕಲ್ಮಶವಾದರೆ ಮತ್ತೇನು ಇಲ್ಲ... ಮತ್ತೆ ಸ್ನೇಹ ಬೆಳೆಯುದು ಕಷ್ಟ ಸಾದ್ಯ ಅಲ್ವ...?

ನಿಮ್ಮವ,
ರಾಘು.

Raghu said...

ಪ್ರಕಾಶಣ್ಣ,
"ಗೆಳೆತನವೆ ಇಹಲೋಕಕಿರುವ ಅಮೃತ
ಅದನುಳಿದರೇನಿಹುದು ಜೀವನ್ಮೃತ.." ಅದ್ಭುತವಾದ ಸಾಲು... ಎಷ್ಟು ಅರ್ಥ ಇದೆ ಅಲ್ವ.. ?
ನಮ್ಮ ಸ್ನೇಹಿತರು ಎಂದು ನಮ್ಮ ಮನಸ್ಸಿಗೆ ಅನಿಸಿದ ಮೇಲೆ ಅವರಿಗೆ ಏನೇ ಅಗಲಿ, ಅವರು ಏನೇ ಹೇಳಲಿ ಜೊತೆ ಆಗೋದು ನಮ್ಮ ದರ್ಮ.. ಕಷ್ಟ, ಸುಖ ಎಲ್ಲವನ್ನು ಹಂಚ್ಕೊಲ್ಬೇಕು...

ಕಾಮೆಂಟ್ ನೋಡಿ ಬಹಳ ಖುಷಿ ಆಯಿತು... ಧನ್ಯವಾದಗಳು..

ದಿನಕರ್ ಅವರೇ,
ಸ್ನೇಹ ಎಲ್ಲರಿಗೂ ಬೇಕೇ ಬೇಕು... ನೀವು ಹೇಳಿದ ಹಾಗೆ ಅದು ಎಲ್ಲರ ಜರೂರತ್ತು!! ಧನ್ಯವಾದಗಳು...

ನಿಮ್ಮವ,
ರಾಘು.

manamukta said...

ತು೦ಬಾ positive ಆಗಿದೆ ಕವನ. ಹೀಗೆಯೇ
ಒಳ್ಳೊಳ್ಳೆ ಕವನಗಳು ಬರುತ್ತಿರಲಿ. ಧನ್ಯವಾದಗಳು.

ಮನಸು said...

ರಘು,
ಒಳ್ಳೆ ಕವನ... ನಿಜ ಸ್ನೇಹಕ್ಕೆ ಅಷ್ಟು ಶಕ್ತಿ ಇದೆ... ಕತ್ತಲೆಯನ್ನು ಸರಿಸಿ ಬೆಳಕನೀಡುತ್ತದೆ.

Raghu said...

ಮನಮುಕ್ತ,
ಸ್ನೇಹನು ಹಾಗೆ positive ಅಗಿನೆ ಇರ್ಬೇಕು.. ಅದೇ ಚಂದ.. ಇಲ್ಲ ಅಂದ್ರೆ ಕಷ್ಟ ಆಗುತ್ತೆ ಅಲ್ವ..? ನಿಮ್ಮ ಪ್ರೋಸ್ಸಹ ಹೀಗೆ ಇರಲಿ..
ಧನ್ಯವಾದಗಳು...

ಮನಸು,
ಹೌದು.. ಸ್ನೇಹದ ಬೆಳಕು ಇರುವುದು ಕತ್ತಲೆಯನ್ನು ಅಳಸಲಿಕ್ಕೆ... :) ಧನ್ಯವಾದಗಳು...

ನಿಮ್ಮವ,
ರಾಘು.

Roopesh Gowda said...

ಒಂದೇ ಆತ್ಮದ ಎರಡು ಮನಸ್ಸು ಸ್ನೇಹ 
ಎರಡು ಮನಸ್ಸಿನ ಒಂದೇ ಕನಸು ಸ್ನೇಹ 
ಬೇಕಂದಾಗ ಸಹಾಯ ಮಾಡುವ ಸ್ನೇಹ ಹಸ್ತ 
ದಣಿವಾದಾಗ ನೆರಳು ನೀಡುವ ಸ್ನೇಹ ವ್ರಕ್ಷ

ಈ ಸಾಲುಗಳು ನನಗೆ ತುಂಬಾ ಇಷ್ಟವಾದ ಸಾಲುಗಳು ಆದರೆ ಇದು ಸುಳ್ಳು ಅಂತ ನನಗೆ ಇವಾಗ ಅರಿವಾಗುತ್ತಿದೆ. ನನ್ನಲ್ಲಿದ್ದ ಸ್ನೇಹವನ್ನು ಬಚ್ಚಲಿಗೆಸೆದು ಅಸಹ್ಯ ಹುಟ್ಟಿಸಿಬಿಟ್ಟಿದ್ದಾರೆ. ತಮ್ಮ ಸ್ವಾರ್ಥಕ್ಕಾಗಿ ಮಾತ್ರ ಸ್ನೇಹ ಮಾಡುತ್ತಾರೆ.