Saturday, December 12, 2009

ಹೀಗೇಕೆ... ಅನಿಸುತಿದೆ...

ಮಾತಿನ ಮಾತಿನಲಿ ಪ್ರೀತಿಯ ನೆನಪಿನಲಿ
ಕನಸಿನ ಬಯಲಲಿ ನೀ ನನ್ನ ಸನಿಹದಲಿ ಬಂದು ಹೇಳುತಿರುವೆ
ಒಂದೆರಡು ಮಾತು ಆಡು ನೀನೆಂದು
ನೂರೆಂಟು ಕನಸು ಕಾಣುವೆ ನಾನೆಂದುಹೇಳುತ ನಾಚುತ
ಮರೆಯಾದೆ ಪುಷ್ಪರಾಶಿಯ ನಡುವಲ್ಲಿಯೇ ಹೋದವಳ
ಹುಡುಕುತ ನಾ ಬಂದೆ, ಎಷ್ಟು ಹುಡುಕಿದರೂ ಇರಲಿಲ್ಲ ನೀ ಅಲ್ಲಿ
ಏಕೆ ಹೀಗೆ ಅಂದುಕೊಳ್ಳುವಸ್ಟರಲ್ಲಿ
ಬೆನ್ನಹಿಂದೇನೆ ನಸುನಗುತ ನಿಂತಿರುವೆ ಹೊವೊಂದು ಮುಡಿದು ನಸುನಗುತ ನಿಂತಿರುವೆ...

ಮಾತಿನ ಮಾತಿನಲಿ ಪ್ರೀತಿಯ ನೆನಪಿನಲಿ
ಕನಸಿನ ಬಯಲಲಿ ನೀ ನನ್ನ ಸನಿಹದಲಿ ಬಂದು ಹೇಳುತಿರುವೆ
ಒಂದೆರಡು ಮಾತು ಆಡು ನೀನೆಂದು
ನೂರೆಂಟು ಕನಸು ಕಾಣುವೆ ನಾನೆಂದು...

ಮನಸಿನ ಮನಸಲಿ ನೀ ನಿಂತು ಕೊಂಡಿರುವೆ
ಹೇಳಬೇಕು ಅಂದುಕೊಂಡಿರುವ ಎಲ್ಲಾ ವಿಷಯವನು ನೀ ತಿಳಿದುಕೊಂಡಿರುವೆ
ಬೀಳುವ ಕನಸನು ಲೆಕ್ಕ ಹಾಕಿ ನೀ ನೋಡಿದಮೇಲೆಂತೋ
ಕಿರುನಗೆಯ ಬೀರಿ ಕಣ್ಮುಂದೇನೆ ಚಲಿಸಿರುವೆ
ಅದ ಕಂಡಮೇಲೆಂತೋ ನನ್ನ ಕಣ್ಣು
ಈ ಹುಡುಗಿ ಚುಕ್ಕಿ ತಾರೆಗಳ ಮಡಿಲಲ್ಲಿಯು ಹೊಳೆಯುವಳು ಎಂದ್ ಹೇಳುತ
ಅವಳ ಹಿಂದೆ ಹಿಂದೇನೆ ಹೊರಟಿತ್ತು ಪಯಣವ ಬೆಳೆಸಿತ್ತು...

ಮಾತಿನ ಮಾತಿನಲಿ ಪ್ರೀತಿಯ ನೆನಪಿನಲಿ
ಕನಸಿನ ಬಯಲಲಿ ನೀ ನನ್ನ ಸನಿಹದಲಿ ಬಂದು ಹೇಳುತಿರುವೆ
ಒಂದೆರಡು ಮಾತು ಆಡು ನೀನೆಂದು
ನೂರೆಂಟು ಕನಸು ಕಾಣುವೆ ನಾನೆಂದು...

ಎದೆಯ ಎದೆಯಲಿ ನೀನೆ ತುಂಬಿಕೊಂಡಿರುವೆ
ಬಾಳ ಪುಟಗಳಲಿ ನಿನ್ನ ಹೆಸರು ಬರೆದುಕೊಂಡಿರುವೆ ಎಂದೆಹೇಳಬೇಕೆನ್ನುವಸ್ಟರಲಿ
ಕನಸೊಂದು ಕಣ್ಣ ಮುಂದೇನೆ ನನಸಾಗುವ ರೀತಿ ಕಂಡು ಬೆರಗಾಗಿ ಹೋದವ ನಾನು
ನಿನ್ನ ಮಿಡಿಯುವ ಪ್ರೀತಿಯ ಮಿಡಿತಕೆ ಮರುಳಾಗಿ ಹೋದೆ ನಾನು...

ಮಾತಿನ ಮಾತಿನಲಿ ಪ್ರೀತಿಯ ನೆನಪಿನಲಿ
ಕನಸಿನ ಬಯಲಲಿ ನೀ ನನ್ನ ಸನಿಹದಲಿ ಬಂದು ಹೇಳುತಿರುವೆ
ಒಂದೆರಡು ಮಾತು ಆಡು ನೀನೆಂದು
ನೂರೆಂಟು ಕನಸು ಕಾಣುವೆ ನಾನೆಂದು...

ನಿಮ್ಮವ,
ರಾಘು.

17 comments:

ಜಲನಯನ said...

ಪ್ರೀತಿಯ, ಪ್ರೀತಿಸಿದ ಹೃದಯಗಳ ತೊಳಲಾಟವನ್ನು ನಿಮ್ಮ ಕವನ-ಕಮ್-ಕಥನ ಚನ್ನಾಗಿ ಪ್ರಸ್ತುತಪಡಿಸಿದೆ....ಅಮ್ದ ಹಾಗೆ..ಇಷ್ಟೊಂದು ತಾಕಲಾಟಗಳು ಮನಸ್ಸಿನಲ್ಲಿ ಆಗುವುದು ಪ್ರೀತಿಯ ಮೇಲಿನ ಪ್ರೀತಿ ಕಾರಣವೇ,, ನಿಮ್ಮ ಅನುಭವವೇ? ಅಥವಾ ಕೇಳಿದ್ದೆ?....ರಾಘು....ಒಟ್ಟಿನಲ್ಲಿ ಒಳ್ಳೆ ಪ್ರಯತ್ನ.

Prabhuraj Moogi said...

ಹಾಗೆ ಸುಮ್ಮನೇ ಹೀಗೇ ಅನಿಸೋದು... ಅದೇ ಹೀಗೇಕೆ ಅಂತ ಹೇಳೊಕಾಗಲ್ಲ. ಚೆನ್ನಾಗಿದೆ ಕವನ

Snow White said...

ತುಂಬ ಚೆನ್ನಾಗಿದೆ ನಿಮ್ಮ ಕವನ ರಾಘು ಅವರೇ, ಪ್ರೀತಿಯ ಸವಿಯನ್ನು ಎಷ್ಟು ಚೆನ್ನಾಗಿ ಬಣ್ಣಿಸಿರುವಿರಿ :) :)

Creativity!! said...

ಬಹಳ ಚೆನ್ನಾಗಿಧೆ.

manamukta said...

ನಿಮ್ಮ ಕನಸುಗಳೆಲ್ಲಾ ನನಸಾಗಲಿ. ಕವನಗಳು ದಿನದಿ೦ದ ದಿನಕ್ಕೆ ಚೆನ್ನಾಗಿ ಬರುತ್ತಿವೆ.....ಒಳ್ಳೆಯದು....
ಮತ್ತೆ.. ನನಸನ್ನು ಜೊತೆಯಾಗಿಟ್ಟು ಕನಸು ಕಾಣಿರಿ... ಆಗ ಕನಸುಗಳೆಲ್ಲಾ ನನಸಾಗಲು ತಡವಾಗುವುದಿಲ್ಲ.
ವ೦ದನೆಗಳು...

sunaath said...

ಕನಸಿನಲಿ ಕಂಡವಳು, ಮನಸಿನಲಿ ನಿಂದವಳು, ನನಸಾಗದಿರುವಳೆ ರಘು? ಕವನ ಚೆನ್ನಾಗಿದೆ.

ಆನಂದ said...

ರಘು,
ಕವನ ಚೆನ್ನಾಗಿದೆ.

ದಿನಕರ ಮೊಗೇರ.. said...

ರಘು ಸರ್,
ತುಂಬಾ ಚೆನ್ನಾಗಿದೆ ಕವನ.....

ಶಿವಪ್ರಕಾಶ್ said...

Nice One Raghu :)

ಸಾಗರದಾಚೆಯ ಇಂಚರ said...

ತುಂಬಾ ಸುಂದರವಾಗಿದೆ
ಏನು ಸರ್ ವಿಶೇಷ :)
ಇಷ್ಟೊಂದು ಪ್ರೇಮ ತುಂಬಿದ ಕವನ
ಬಹಳ ಸೊಗಸಾಗಿದೆ

Raghu said...

ಜಲನಯನ ಸರ್,
ಹಹ್ಹ ಹ್ಹ... ಯಾವ ಯಾವ ಟೈಪ್ ಕವನ ಹೊರ ಬರುತ್ತೋ ಹಾಗೇನೆ ಇರುತ್ತೆ ಬಾವನೆಗಳು.. ಅದನ್ನ ಬಿಟ್ಟು ಹೆಚ್ಚೇನು ಇಲ್ಲ.. :)
ಕಾಮೆಂಟ್ ಮಾರ್ಕ್ ಮಾಡಿದ್ದಕ್ಕೆ ಧನ್ಯವಾದಗಳು...

ಪ್ರಭು ಅವರೇ,
ಹ ಹ್ಹ ಹ್ಹ ಸರಿಯಾದ ಮಾತು... ಹೀಗೆ ಸುಮ್ಮನೆ.. :) ಧನ್ಯವಾದಗಳು....

ನೆನಪು,
:) ಧನ್ಯವಾದಗಳು...ಪ್ರೀತಿಯ ಸವಿ ಸಿಹಿ ಅಲ್ಲವೇ ..?? :)

Creativity,
ಧನ್ಯವಾದಗಳು... :)

ನಿಮ್ಮವ,
ರಾಘು.

Raghu said...

ಮನಮುಕ್ತ ಅವರೇ,
ಧನ್ಯವಾದಗಳು... ನಿಮ್ಮೆಲ್ಲರ ಪ್ರೋಸ್ಸಹ ದಿನದಿಂದ ದಿನಕ್ಕೆ ಹೊಸ ಹೊಸದು ಬರಿಯೋಕ್ಕೆ ಕಾರಣ... :) :)
ನಿಮ್ಮವ,
ರಾಘು.

ಚುಕ್ಕಿಚಿತ್ತಾರ said...

ಚೆ೦ದದ ಕವನ . ಹೀಗೆಲ್ಲಾ ಅನಿಸುತಿದೆ ಯಾಕೆ ? ಸಿಹಿ ಸುದ್ದಿ ಏನಾದರೂ ಇದೆಯಾ....? ಇದ್ದರೆ ನಮಗೂ ತಿಳಿಸಿ. ನಾವೂ ಸ೦ತೋಷ ಪಡುತ್ತೇವೆ..!!!

ಮನಸು said...

ಮೌನವಾಗೇ ಎಷ್ಟೊಂದು ಪದಗಳು ಹುಟ್ಟುತ್ತವೆ ಹಹಹ... ತುಂಬಾ ಚೆನ್ನಾಗಿದೆ ನಿಮ್ಮ ಪ್ರೀತಿಯ ಪರಿ...ಕನಸು ನನಸಾಗಲಿ

Anonymous said...

wow, ಅಬ್ಬ!!!ತುಂಬ ದಿವಿನಾಗಿದೆ!!!
:-)
ಮಾಲತಿ ಎಸ್.

ಗೌತಮ್ ಹೆಗಡೆ said...

raghu sir kavana nice..:)

ಸಿಮೆಂಟು ಮರಳಿನ ಮಧ್ಯೆ said...

ಕವನ ..
ಅದರ ಭಾವಗಳು ಸುಂದರವಾಗಿದೆ...

"ಮಾತಿನ ಮಾತಿನಲಿ ಪ್ರೀತಿಯ ನೆನಪಿನಲಿ
ಕನಸಿನ ಬಯಲಲಿ ನೀ ನನ್ನ ಸನಿಹದಲಿ ಬಂದು ಹೇಳುತಿರುವೆ
ಒಂದೆರಡು ಮಾತು ಆಡು ನೀನೆಂದು
ನೂರೆಂಟು ಕನಸು ಕಾಣುವೆ ನಾನೆಂದು..."

ಈ ಸಾಲುಗಳು ಬಹಳ ಇಷ್ಟವಾದವು..

ಅಭಿನಂದನೆಗಳು.. ಚಂದದ ಕವಿತೆಗೆ...

ಬರಲು ತಡವಾದುದಕ್ಕೆ ಬೇಸರಿಸದಿರಿ..

ಪ್ರಕಾಶಣ್ಣ..