Friday, January 15, 2010

ಬದುಕು... ಚಲಿಸುವ ಬಂಡಿ...

ನಿನ್ನೆಯ ನೋವನು ಇಂದು ಮರೆಯುವ
ನಾಳೆಯ ಕನಸನು ಮತ್ತೆ ಕಾಣುವ
ಸೋಲಿಗೆ ಹೆದರಿ ಮುದುಡಿ ಕೂರದೆ
ನೆನ್ನೆಯ ನೆನಪನು ನೆನೆಯುತ ಸಮಯ ಕಳೆಯದೆ
ಕಾಲವ ಹಿಂದಿಕ್ಕಿ ಮುಂದೆ ಸಾಗುವ ಮನಸು ಮಾಡುವ
ಏನೇ ಅಗಲಿ, ಬಂದದ್ದೆಲ್ಲಾ ಬರಲಿ
ನಿನ್ನೆಯ ನೋವನು ಇಂದು ಮರೆಯುವ
ನಾಳೆಯ ಕನಸನು ಮತ್ತೆ ಕಾಣುವ...

ಬದುಕು ನಮ್ಮದು ನೋವು ನಲಿವಿನ
ಹಳಿಯಲಿ ಚಲಿಸುವ ಬಂಡಿಯು
ಹಿಂದೆ ತಿರುಗಿ ಚಲಿಸುವುದುಂಟೇ
ಚಲಿಸುವ ಬಂಡಿಯು ಚಲಿಸುತಲಿರುವುದು
ಅವರಿವರು ಬರುವರೆಂದು ಕಾಯುವುದುಂಟೇ
ಏನೇ ಅಗಲಿ, ಬಂದದ್ದೆಲ್ಲಾ ಬರಲಿ
ನಿನ್ನೆಯ ನೋವನು ಇಂದು ಮರೆಯುವ
ನಾಳೆಯ ಕನಸನು ಮತ್ತೆ ಕಾಣುವ...

ಗಾಳಿಪಟವು ಹಕ್ಕಿಯ ನೋಡಿ
ಗಗನದ ತುಂಬಾ ನಾ ಹಾರುವೆ ಎಂದರೂ
ಗಾಳಿಯು ಇಲ್ಲದೆ ಬಾನಲಿ ತೇಲುವುದುಂಟೇ
ಭರವಸೆ ಇಲ್ಲದ ಬಾಳು ನಗುತ ಸಾಗುವುದುಂಟೇ
ಏನೇ ಅಗಲಿ, ಬಂದದ್ದೆಲ್ಲಾ ಬರಲಿ
ನಿನ್ನೆಯ ನೋವನು ಇಂದು ಮರೆಯುವ
ನಾಳೆಯ ಕನಸನು ಮತ್ತೆ ಕಾಣುವ...

ನಿಮ್ಮವ,
ರಾಘು.

36 comments:

ಸೀತಾರಾಮ. ಕೆ. said...

ಚಲನಶೀಲ ಹಾಗೂ ನಿರ೦ತರತೆ ಜಗದ ಪಯಣ. ಚೆ೦ದದ ಕವನ.

ಶ್ರೀಧರ said...

ನಿನ್ನೆಯ ನೋವನು ಇಂದು ಮರೆಯುವ -- > ಇಂದೇ ಮರೆಯುವ sounds good...ನಿಮ್ಮ ಕವನ ಚೆನ್ನಾಗಿ ಮೂಡಿ ಬಂದಿದೆ.

ಚುಕ್ಕಿಚಿತ್ತಾರ said...

ಆಶಾವಾದದ ಪ್ರತೀಕ...
ನಿಮ್ಮಯ ಕವನ....
ಚೆ೦ದದ ಕವನ..
ವ೦ದನೆಗಳು.

Creativity!! said...

ಅತ್ಹ್ಯುಥಮವಾದ ಕವನ.

ಪ್ರವೀಣ್ ಭಟ್ said...

tumba sundaravaada kavana.... baduku bandi .. navu prayanikaraste...

ದಿನಕರ ಮೊಗೇರ.. said...

ರಘು,
ಚೆನ್ನಾಗಿದೆ..... ಪ್ರಕ್ರತಿಯ ಪಾಠ ಹೇಳುತಿದೆ..... ಯಾವುದೋ ತಾಳಕ್ಕೆ ಬರದ ಹಾಗಿದೆ..... ಸುಂದರವಾಗಿದೆ.....no

nenapina sanchy inda said...

Very postive and flowing poetry.
:-)
malathi S

ಮನಸು said...

tumba chennagide oLLeya bhaava poorna kavana.

ಮನಮುಕ್ತಾ said...

ರಾಘು ಅವರೆ,

ತು೦ಬಾ ಚೆನ್ನಾಗಿ ಕವನಿಸುತ್ತಿದ್ದೀರಿ.
ಚಲಿಸುವ ಬ೦ಡಿಯು ಚಲಿಸುತಲಿರುವುದು...
ಹಿಡಿಸಿತು.

ಸವಿಗನಸು said...

ಸುಂದರ ಕವನ...
ಚೆನ್ನಾಗಿದೆ.......

ಸಾಗರದಾಚೆಯ ಇಂಚರ said...

ರಘು
ತುಂಬಾ ಸುಂದರ ಕವನ
ಬದುಕಿನ ಧನಾತ್ಮಕತೆಯಡೆಗಿನ ಚಿಂತನೆ ಸೊಗಸಾಗಿದೆ

Subrahmanya Bhat said...

ಕವನ ಆತ್ಮವಿಶ್ವಾಸವನ್ನು ಹೆಚ್ಚಿಸುವಂತಿದೆ....ಚೆನ್ನಾಗಿದೆ. ಧನ್ಯವಾದಗಳು.

Sumana said...

"ನಿನ್ನೆಯ ನೋವನು ಇಂದು ಮರೆಯುವ
ನಾಳೆಯ ಕನಸನು ಮತ್ತೆ ಕಾಣುವ"...ಎಂತಹ ಆಶಾವಾದದ ಸಾಲುಗಳು ಇವು!!
"ಭರವಸೆ ಇಲ್ಲದ ಬಾಳು ನಗುತ ಸಾಗುವುದುಂಟೇ"...ಇದನ್ನ ಓದಿದಾಗಲೇ ಒಂಥರ 'ಭರವಸೆಯ ದೀಪ' ಬೆಳಗಲಾರಂಭಿಸಿದೆ!!
keep it up Raaghu! be inspiring!!

ಗೌತಮ್ ಹೆಗಡೆ said...

nice boss:)keep it up...

ಆನಂದ said...

Come what may...I like the attitude
Good one Raghu :)

sunaath said...

ರಘು,
ಸರಿಯಾದ ಜೀವನದರ್ಶನವನ್ನು ಸೊಗಸಾಗಿ ಸಾರುವ ಕವನ!

ಶಿವಪ್ರಕಾಶ್ said...

Nice one raghu :)

Nisha said...

Nice one.

Deepasmitha said...

ನಿಮ್ಮ ಆಶಾವಾದ ಹೀಗೆ ಇರಲಿ

Raghu said...

ಸೀತಾರಾಮ ಸರ್...
ಬದುಕು ನಿರಂತರ...ಸಾಗ್ತಾನೆ ಇರ್ಬೇಕು... ಕಷ್ಟ ಸುಖ ಬರುತ್ತೆ ಹೋಗುತ್ತೆ... ಮೆಚ್ಚುಗೆಗೆ ಧನ್ಯವಾದಗಳು...

ಶ್ರೀಧರ ಅವರೇ,
ಸಲಹೆಗೆ ಮತ್ತು ಮೆಚ್ಚುಗೆಗೆ ಧನ್ಯವಾದಗಳು... :)

ನಿಮ್ಮವ,
ರಾಘು.

Raghu said...

ಚುಕ್ಕಿ ಚಿತ್ತಾರ ಅವರೇ...
ಆಸೆ ಇದ್ದರೆ ಮಾತ್ರ ಬಾಳು..ನಗು..ಕನಸು.. ಎಲ್ಲಾ ಇರೋದು..

Creativity ,
ಧನ್ಯವಾದಗಳು...

ನಿಮ್ಮವ
ರಾಘು,

Raghu said...

ಪ್ರವೀಣ್ ಭಟ್..
ಹೌದು... ಬದುಕು ಒಂದು ಬಂಡಿ... ನಾವು ಹೇಳಿದ್ದು ಏನು ಕೇಳೋಲ್ಲ ಅದು... ಅದು ಹೋದಲೆಲ್ಲ ನಾವು..! ಧನ್ಯವಾದಗಳು...

ದಿನಕರ್ ಸರ್..
ನಮ್ಮ ಸುತ್ತಮುತ್ತಲಿನ ಪರಿಸರ ನಮಗೆ ಅದೆಸ್ಟೋ ಪಾಠ ಕಲಿಸುತ್ತೆ... ನಾವು ಕಲಿಬೇಕಸ್ತೆ...!
ಇತ್ತೀಚಿಗೆ ತಾಳಕ್ಕೆ ತಕ್ಕ ಹಾಗೆ ಬರೀತಾ ಇದ್ದೀನಿ... :)
ಧನ್ಯವಾದಗಳು...

ನಿಮ್ಮವ,
ರಾಘು.

Raghu said...

ಮಾಲತಿ ಎಸ್...
ಕಾಮೆಂಟ್ ನೋಡಿ ಖುಷಿ ಹೆಚ್ಚಾಯಿತು.... :) life needs positiveness... ಏನಂತೀರಾ..?
ಧನ್ಯವಾದಗಳು...

ಮನಸು ಅವರೇ... ಮೆಚ್ಚುಗೆಗೆ ಧನ್ಯವಾದಗಳು...

ನಿಮ್ಮವ,
ರಾಘು.

Raghu said...

ಮನಮುಕ್ತಾ, ಸವಿಗನಸು ಅವರೇ... :) ಮೆಚ್ಚುಗೆಗೆ ಧನ್ಯವಾದಗಳು.
ನಿಮ್ಮವ,
ರಾಘು.

ರವಿಕಾಂತ ಗೋರೆ said...

Hi Raghu..
Super..
ಗಾಳಿಪಟವು ಹಕ್ಕಿಯ ನೋಡಿ
ಗಗನದ ತುಂಬಾ ನಾ ಹಾರುವೆ ಎಂದರೂ
ಗಾಳಿಯು ಇಲ್ಲದೆ ಬಾನಲಿ ತೇಲುವುದುಂಟೇ

aadare ninneya novanu mareyuvudu solpa kashta allave...

Snow White said...

ನಿನ್ನೆಯ ನೋವನು ಇಂದು ಮರೆಯುವ
ನಾಳೆಯ ಕನಸನು ಮತ್ತೆ ಕಾಣುವ...

wonderful lines sir :)

ಜಲನಯನ said...

ಗಾಳಿಪಟವು ಹಕ್ಕಿಯ ನೋಡಿ
ಗಗನದ ತುಂಬಾ ನಾ ಹಾರುವೆ ಎಂದರೂ
ಗಾಳಿಯು ಇಲ್ಲದೆ ಬಾನಲಿ ತೇಲುವುದುಂಟೇ
ಭರವಸೆ ಇಲ್ಲದ ಬಾಳು ನಗುತ ಸಾಗುವುದುಂಟೇ ...
ಹಾರಿದ ಮಾತ್ರಕ್ಕೆ ಗಾಳಿಪಟ ತನ್ನನ್ನು ಹಕ್ಕಿಯೆಂದುಕೊಳ್ಲುವುದು..ತರವಲ್ಲ ಎನ್ನುವಭಾವ.
ರಾಘು ...ಏನಾದರೂ ಮುಂದಕ್ಕೆ ಹೋಗಬೇಕು ಎನ್ನುವ ಭಾವ...ಚನ್ನಾಗಿದೆ ಕವನ

Uma Bhat said...

ಬದುಕಿನ ಬಂಡಿ ಹಿಂದಕ್ಕೆ ಚಲಿಸುವುದಿಲ್ಲಾ .........
ಸೊಂದರ ಕವನ.

tentcinema said...

nice poems.
- Badarinath Palavalli
cameraman, Kasthuri tv
Pl. visit my blog:
www.barari-poems.blogspot.com

Ranjita said...

ಭರವಸೆ ಇಲ್ಲದ ಬಾಳು ನಗುತ ಸಾಗುವುದುಂಟೇ ತುಂಬಾ ಚೆನ್ನಾಗಿದೆ Raghu ಸರ್ ..

ತೇಜಸ್ವಿನಿ ಹೆಗಡೆ- said...

ಆಶದೀಪವನ್ನು ಬೆಳಗುವ ಕವನ ಸುಂದರವಾಗಿದೆ.

Sri said...

Nice one raghu! Just happened to have a look at it through tejaswini's blog post..

found one comment on optimisim... That's the basis of my thought too... eg: http://chitta--tochidatta.blogspot.com/2009/12/blog-post_12.html

Very nice to have sen this blog.. :)

ಏಕಾಂತ said...

Namasthe Raghu avre..
Hage summane e kavana Manomurhty ya kaigitte chendadondu hadagabahudu!
saral hagu sundara.
Profile ge baredukondada baraha kudda aste.
Shubhavagali. Matte bareyiri :-)

Raghavendra said...

ಅಶಾವಾದವಿದೆ ಪದ್ಯದಲ್ಲಿ.. ಮುಂದುವರೆಯಲಿ ಕಾವ್ಯದ ಕೃಷಿ..

ಗುರು-ದೆಸೆ !! said...

'Raghu' ಅವ್ರೆ..,

ಹೌದು ! ಸವೆಸಿದ ದಾರಿಯ ಹಿಂದೆ ತಿರುಗಿ ನೋಡಲಷ್ಟೇ ಸಾಧ್ಯ..!

ನನ್ನ 'ಮನಸಿನಮನೆ'ಗೆ ಬನ್ನಿ:http://manasinamane.blogspot.com/

Sushma Sindhu said...

ರಘು ರವರೆ,
ತು೦ಬಾ ಅರ್ಥಪೂರ್ಣವಾಗಿದೆ :)