Sunday, February 28, 2010

ನಗುವಿನ ಹೂಮಳೆ

ಅದೇನು ಅಂತ ಹೇಳಲಿ, ಅದ್ಯಾವ ರಾಗದಲ್ಲಿ ಹಾಡಲಿ
ಎದೆಯಲಿ ಒಡಲಲಿ ಪ್ರೀತಿ ಕಚಗುಳಿ
ಕನಸಲಿ ಮನಸಲಿ ನೀನು ನನ್ನಲಿ...

ಅದೆಂಥ ಮೋಡಿ ನಿನ್ನದು, ಮನಸು ನಿನ್ನ ಬಿಟ್ಟು ಕೂರದು
ಬಳಿಯಲಿ ನಗುವಲಿ ಒಲವ ಸುಳಿಯಲಿ
ಮಾತಲಿ ನೆನಪಲಿ ನೀನು ನನ್ನಲಿ

ಸೋನೆ ಮಳೆಯಲಿ ನೀನು ಜೊತೆಯಲಿ
ಬಯಸಿ ಬಂದ ಹೂಮಳೆ ಬಾನಿನಂಚಲಿ
ಮೆಲ್ಲ ಮುದ್ದು ನಸುನಗೆ ತುಟಿಯಂಚಲಿ

ಅದೇನು ಅಂತ ಹೇಳಲಿ, ಅದ್ಯಾವ ರಾಗದಲ್ಲಿ ಹಾಡಲಿ
ಎದೆಯಲಿ ಒಡಲಲಿ ಪ್ರೀತಿ ಕಚಗುಳಿ
ಕನಸಲಿ ಮನಸಲಿ ನೀನು ನನ್ನಲಿ...

ಅದೆಷ್ಟು ಬಾರಿ ಕೇಳಲಿ, ಅದ್ಯಾವ ಗುಡಿಯಲಿ ಬೇಡಲಿ
ಅಕ್ಕರೆ, ಮಮತೆಗೆ ಅವಳೇ ದೇವತೆ
ಬೆಳಗುವ ಬೆಳಕಿಗೇಕೆ ಬೇಕು ಹೋಲಿಕೆ

ಅದೆಲ್ಲಿ ಅಂತ ಹುಡುಕಲಿ, ಮತ್ತೆ ಮತ್ತೆ ನಿನ್ನಲಿ
ಖುಷಿಯಲಿ, ಸುಖದಲಿ, ಅನುರಾಗದಲೆಯಲಿ
ಸೋಲಲಿ ಗೆಲುವಲಿ ನೀನು ನನ್ನಲಿ

ಅದೇನು ಅಂತ ಹೇಳಲಿ, ಅದ್ಯಾವ ರಾಗದಲ್ಲಿ ಹಾಡಲಿ
ಎದೆಯಲಿ ಒಡಲಲಿ ಪ್ರೀತಿ ಕಚಗುಳಿ
ಕನಸಲಿ ಮನಸಲಿ ನೀನು ನನ್ನಲಿ...


ನಿಮ್ಮವ,
ರಾಘು.

27 comments:

ಮನಮುಕ್ತಾ said...

ರಾಘು ಅವರೆ,
ಪ್ರೀತಿಯ ಭಾವವನ್ನು ಸು೦ದರವಾಗಿ ವರ್ಣಿಸಿದ್ದೀರಿ.ನಗುವಲಿ,ಖುಶಿಯಲಿ,ಅನುರಾಗದಲಿ, ಸೋಲಲ್ಲಿ ಗೆಲುವಲ್ಲಿ ಎಲ್ಲೆಲ್ಲೂ ಪ್ರೀತಿಯನ್ನು ಕ೦ಡಿದ್ದೀರಿ. ಅಭಿನ೦ದನೆಗಳು. ಕವಿತೆ ತು೦ಬಾ ಚೆನ್ನಾಗಿದೆ.

ಜಲನಯನ said...

ರಾಘು..ಚನ್ನಾಗಿದೆ ಕವನ..ನಿಮ್ಮ ಹುಡುಕಾಟದ ಹುಡುಗಿ ಸಿಕ್ಕರೆ ತಿಳಿಸಿ...ಬೆಳಗುವ ಬೆಳಕಿಗೆ ಬೇಕೇ ಹೋಲಿಕೆ....ಹೌದು..superlatives ಗೆ ಹೋಲಿಕೆ ಕೊಡೋದು ಕಷ್ಟವೊಂದೇ ಅಲ್ಲ ಅದು ವ್ಯರ್ಥ ಸಹಾ

Anonymous said...

sakkattaagide raghu avare..

ಚುಕ್ಕಿಚಿತ್ತಾರ said...

ಪ್ರೀತಿಯ ಮೋಡಿಯಲ್ಲಿ ಮುಳುಗಿರುವ ರಾಘು ಅವರೆ..ಕವನ ಚನ್ನಾಗಿದೆ.ವ೦ದನೆಗಳು.

ಮನಸು said...

tumba chennagide kavana istavaayitu

Nisha said...

Preethi bagge thumba chennagi bardiddiri Raghu. Very nice.

Unknown said...

ರಾಘು,
ಸೊಗಸಾದ ಕವನ....
ತುಂಬ ಚೆನ್ನಾಗಿ ಬರೆದಿದ್ದೀರ...
ಬಹಳ ದಿನದಿಂದ ಕಾಣಲಿಲ್ಲ...

Ranjita said...

ತುಂಬಾ ದಿನಗಳ ನಂತರ ಚೆಂದದ ಕವನದೊಂದಿಗೆ ಕಾಣಿಸಿಕೊಂಡ್ರಿ ಸರ್ ,
ಚೆನ್ನಾಗಿದೆ :)

Anonymous said...

oh wow. kyaa baat hai!!!!
:-)
malathi S

sunaath said...

ರಘು,
ನಿಮ್ಮ ಕವನದಲ್ಲಿ ಪ್ರೀತಿಯ ಅಭಿವ್ಯಕ್ತಿ ಸೊಗಸಾಗಿದೆ.
ಕಾವ್ಯಕನ್ಯೆ ಒಲಿದಿದ್ದಾಳೆ; ಕನಸಿನ ಕನ್ಯೆಯೂ ಬೇಗನೇ ದೊರಕಲಿ!

ಸವಿಗನಸು said...

ರಾಘು,
ಸೊಗಸಾದ ಕವನ....
ತುಂಬ ಚೆನ್ನಾಗಿ ಬರೆದಿದ್ದೀರ...
ಬಹಳ ದಿನದಿಂದ ಕಾಣಲಿಲ್ಲ....

ಸೀತಾರಾಮ. ಕೆ. / SITARAM.K said...

ಸೊಗಸಾಗಿದೆ

ಸಾಗರದಾಚೆಯ ಇಂಚರ said...

ರಾಘು ಸೊಗಸಾದ ಕವನ
ಯಾವುದೋ ರಾಗಕ್ಕೆ ಹೊಂದಿಕೊಳ್ಳುವಂತಿದೆ

Unknown said...

Chennaagide..

Snow White said...

superb sir :) :) haadina reeti ide..preetiya bhavavannu tumba chennagi bannisiddira :)

ಓ ಮನಸೇ, ನೀನೇಕೆ ಹೀಗೆ...? said...

ರಾಘು ಅವ್ರೆ ....'ಒಲವಿತ್ತ ಗೆಳತಿಗೆ ಕವನದ ಅರ್ಪಣೆ' ತುಂಬಾ ಚೆನ್ನಾಗಿ ಮೂಡಿಬಂದಿದೆ.

Subrahmanya said...

ರಾಘು ಅವರೆ,
ತಡವಾಗಿ ಬಂದೆ, ಕವನವನ್ನು ಪ್ರೀತಿಯಲ್ಲೇ ಮುಳುಗಿಸಿದ್ದೀರಿ.
ಚೆನ್ನಾಗಿದೆ..

V.R.BHAT said...

ಕಾವ್ಯ ಚೆನ್ನಾಗಿದೆ, ಹೋಲಿಕೆ ಬಹಳ ಪ್ರಯತ್ನಿಸಿದ್ದೀರಿ,ಧನ್ಯವಾದಗಳು

V.R.BHAT said...
This comment has been removed by the author.
ತೇಜಸ್ವಿನಿ ಹೆಗಡೆ said...

ಲಾಲಿತ್ಯಪೂರ್ಣವಾಗಿರುವ ಕವನ ಚೆನ್ನಾಗಿದೆ. ಇಷ್ಟವಾಯಿತು :)

ಮನಸಿನಮನೆಯವನು said...

'Raghu ' ಅವ್ರೆ..,

ಸೂಪರ್ರಾಗಿದೆ...

ನನ್ನ 'ಮನಸಿನಮನೆ'ಗೊಮ್ಮೆ ಬನ್ನಿ: http://manasinamane.blogspot.com

Guruprasad said...

ಸೂಪರ್ ಆಗಿ ಇದೆ ರಾಘು,,,, ವೆರಿ ನೈಸ್ ಕವನ....

ಮನದಾಳದಿಂದ............ said...

nice one.

ಪ್ರೀತಿಯ ಪದಗಳ ಹೂಮಲೆಯನ್ನೇ ಸುರಿಸಿದ್ದೀರಲಾ ಸ್ವಾಮಿ? ಯಾರ ನೆನಪಲ್ಲಿ ಅಂತ ಕೇಳಬಹುದಾ?

ಮನಸಿನಮನೆಯವನು said...

'Raghu ' ಅವ್ರೆ..,

ಸೋನೆ ಮಳೆಯಲಿ ನೀನು ಜೊತೆಯಲಿ..
ಚೆನ್ನಾಗಿದೆ.


ನನ್ನ 'ಮನಸಿನಮನೆ'ಗೊಮ್ಮೆ ಬನ್ನಿ: http://manasinamane.blogspot.com (ಮಾರ್ಚ್ 15 ರಂದು ನವೀಕರಿಸಲಾಗಿದೆ)

V.R.BHAT said...

ಆರ್ಷೇಯ ಪದ್ಧತಿಯಂತೆ ನಿಮ್ಮೆಲ್ಲರ ಮನೆಗಳ ಮನಗಳ ಹತ್ತಿರ ಬಂದು ಯುಗಾದಿಯ, ಹೊಸವರ್ಷದ ಶುಭಾಶಯಗಳನ್ನು ಕೋರುತ್ತಿದ್ದೇನೆ, ಹೊಸವರ್ಷ ತಮಗೆಲ್ಲ ಸುಖ-ಸಮೃದ್ಧಿದಾಯಕವಾಗಿರಲಿ.

Ramesh said...

Late gi bandiddakkaagi kshamisi...nimma kavana chennagide Raaghu... keep writing :)

venkat.bhats said...

ಚೆನ್ನಾಗಿವೆ ಸಾಲುಗಳು..
ಮನಸಿನ ಭಾವಗಳು ಪದಗಳಾಗಿ ಮೌನ ತಬ್ಬುತ ಸಾಗಲಿ..