Saturday, March 27, 2010

ನಾಡಿದು.. ಕರುನಾಡಿದು..

ನಾಡಿದು.. ಕರುನಾಡಿದು..
ನಲ್ಮೆಯ.. ಒಲುಮೆಯ.. ಹೆಮ್ಮೆಯ.. ಬೀಡಿದು.. ಕರುನಾಡಿದು..
ಪ್ರೀತಿಗೆ.. ವಿಶ್ವಾಸಕೆ.. ಶಾಂತಿಗೆ.. ತವರೂರಿದು..
ನಾಡಿದು.. ಕರುನಾಡಿದು..
ನಲ್ಮೆಯ.. ಒಲುಮೆಯ.. ಹೆಮ್ಮೆಯ.. ಬೀಡಿದು.. ಕರುನಾಡಿದು.. ||

ಸಹ್ಯಾದ್ರಿಯ ಸೊಬಗಿದೆ..
ದುಮ್ಮುಕ್ಕಿ ಹರಿಯುವ ಕಾವೇರಿ ನದಿಯಿದೆ..
ಬೇಲೂರಿದೆ, ಹಳೇಬೀಡಿದೆ..
ಚಾಮುಂಡಿ ತಾಯಿಯ ಗುಡಿಯಿದೆ..
ನಾಡಿದು.. ಕರುನಾಡಿದು..
ನಲ್ಮೆಯ.. ಒಲುಮೆಯ.. ಹೆಮ್ಮೆಯ.. ಬೀಡಿದು.. ಕರುನಾಡಿದು.. ||

ಸೋಲಲಿ ಗೆಲುವಿನ ನಗೆ ಬೀರುವ ಹೃದಯವಂತರು..
ಜ್ಞಾನದ ಬೆಳಕನು ಎಲ್ಲಡೆ ಹಂಚುವ..
ಪ್ರತಿಫಲ ಬಯಸದೆ ಹಸ್ತವ ಚಾಚುವ
ಗುಣವಂತರು.. ಈ ನಾಡಿನ ಹಿರಿಮೆಯ ಗರಿಗಳು..
ನಾಡಿದು.. ಕರುನಾಡಿದು..
ನಲ್ಮೆಯ.. ಒಲುಮೆಯ..ಹೆಮ್ಮೆಯ.. ಬೀಡಿದು.. ಕರುನಾಡಿದು.. ||

ಬೆಳೆಯುವ ಸಿರಿಗೆ ನಿದರ್ಶನ ಇಲ್ಲಿನ ಮಕ್ಕಳು..
ನಾಳೆಯ ಭರವಸೆಯ ಕಣ್ಗಳು..
ಹತ್ತಾರು ಪ್ರಾಂತ್ಯದ ವಿವಿಧ ಕನ್ನಡ
ನಿತ್ಯಸತ್ಯದ ಸಂತೋಷದ ಅಲೆಗಳು..
ನಾಡಿದು.. ಕರುನಾಡಿದು..
ನಲ್ಮೆಯ.. ಒಲುಮೆಯ..ಹೆಮ್ಮೆಯ.. ಬೀಡಿದು..ಕರುನಾಡಿದು.. ||

ನಿಮ್ಮವ,
ರಾಘು.

20 comments:

sunaath said...

ರಾಘು,
ಕರುನಾಡ ಬಗೆಗಿರುವ ನಿಮ್ಮ ಪ್ರೀತಿಯು ನಿಮ್ಮ ಕವನದಲ್ಲಿ ಸುಂದರವಾಗಿ ಅಭಿವ್ಯಕ್ತವಾಗಿದೆ. ಓದುಗರಲ್ಲಿ ಉಲ್ಲಾಸವನ್ನು ಮೂಡಿಸುತ್ತದೆ.

ಸೀತಾರಾಮ. ಕೆ. / SITARAM.K said...

ಕನ್ನಡನಾಡಿನ ವೈಭವದ ಬಗ್ಗೆ ಸು೦ದರ ವರ್ಣನೆಯ ತಮ್ಮ ಈ ಕವನ ಸು೦ದರವಾಗಿದೆ. ಸಾಗಲಿ ತಮ್ಮ ಪ್ರಯತ್ನ. ಧನ್ಯವಾದಗಳು.

ಸಾಗರಿ.. said...

ಕವನ ತುಂಬಾ ಚೆನ್ನಾಗಿದೆ

ಮನಮುಕ್ತಾ said...

ರಾಘು,
ಕರುನಾಡಿನ ಹಿರಿಮೆ..ನಿಮಗೆ ನಾಡಿನ ಮೇಲಿನ ಒಲುಮೆ ..
ಎಲ್ಲವನ್ನೂ ಬಣ್ಣಿಸಿದೆ ನಿಮ್ಮ ಈ ಕವನ.

ಅ೦ದದ ಸಾಲುಗಳಲ್ಲಿ ಸು೦ದರ ಕವನ!

Subrahmanya said...

ನಾಡ ಪ್ರೇಮದ ಬಗೆಗಿನ ನಿಮ್ಮ ಕವನ ಅತ್ಯವಶ್ಯಕವಾದುದು. ಚೆನ್ನಾಗಿ ವ್ಯಕ್ತಪಡಿಸಿದ್ದೀರಿ.

ಸಂಜು . . said...

ಕನ್ನಡದ ಪ್ರೇಮದ ಬಗ್ಗೆ ನಿಮ್ಮಲ್ಲಿ ಮುಡಿಬಂದ ಕರುಣಾಡ ಕವಿತೆ ನಿಜವಾಗಿಯೂ ಹೃದಯ ತಟ್ಟಿದೆ . .ತುಂಬಾನೆ ಚೆನ್ನಾಗಿದೆ.

ಸವಿಗನಸು said...

ರಾಘು,
ಕರುನಾಡಿನ ಸೊಬಗು ನಿಮ್ಮ ಕವನದಲ್ಲಿ ಸೊಗಸಾಗಿ ಹರಿದು ಬಂದಿದೆ....

ಜಲನಯನ said...

ರಾಘು, ಬರೀ ನವಂಬರಿಗಲ್ಲ ನಮ್ಮ ಕನ್ನಡ ಮನವರಿಕೆ ಎನ್ನುವುದನ್ನು ನಮ್ಮ ಕೊಚ್ಚಿಕೊಳ್ಳುವ ರಾಜಕಾರಣಿಗಳು ಅರಿತರೆ ಒಳ್ಳೆಯದು....ಶಾಸ್ತ್ರೀಯ ಭಾಷೆಯ ಘೋಷಣೆಯಾಗಿ ಎರಡು ವರ್ಷಕ್ಕೂ ಮೇಲಾದರೂ ನಮ್ಮಲ್ಲಿ ..ಅಲ್ಲಿಂದ ಎಲ್ಲಿ ಬಂದಿದ್ದೀವಿ..ಎನ್ನುವುದನ್ನು ನಮ್ಮ ರಾಜಕಾರಣಿಗಳು ಮಾಡುತ್ತಾರೆಯೇ..?
ನಿಮ್ಮ ಕವನ..ನಮ್ಮಲ್ಲಿರುವ ಜಡತೆಯನ್ನು ಓಡಿಸುವುದೇ ನೋಡಬೇಕು...
ಬಹಳ ಸೊಗಸಾಗಿ ಜೋಡಿಸಿದ್ದೀರಿ ಪದಗಳನ್ನು...

Ranjita said...

ಕವನ ತುಂಬಾ ಚೆನ್ನಾಗಿದೆ ರಾಘು ಸರ್ , ನಾಡಿನ ಮೇಲಿನ ಪ್ರೇಮವನ್ನ ಬಹಳ ಸುಂದರವಾಗಿ ಕವನ ರೂಪದಲ್ಲಿ ಹೇಳಿದ್ದೀರಿ ..

ದಿನಕರ ಮೊಗೇರ said...

ರಘು,
ತುಂಬಾ ಸುಂದರ ಕವನ........... ರಾಗಕ್ಕೆ ಬರೆದಹಾಗಿದೆ..........

Unknown said...

Good one..

ಸಾಗರದಾಚೆಯ ಇಂಚರ said...

ಕನ್ನಡ ನಾಡಿನ ಬಗೆಗಿನ ಕವನ
ಸುಂದರ, ಮನಮೋಹಕ
ರಾಗ ಹಾಕಿ ಹಾಡುವಂತಿದೆ

ಚುಕ್ಕಿಚಿತ್ತಾರ said...

nice poem :)

Ramesh said...

Raaghu,

Chennagide... Udayavagali namma cheluva kannaDa naaDu... heege baritha iri...

Snow White said...

kavana tumba tumaba chennagide :) :)

Shashi jois said...

ಕರುನಾಡಿನ ಬಗ್ಗೆ ವರ್ಣಿಸಿದ ನಿಮ್ಮ ಕವನ ಇಷ್ಟವಾಯ್ತು.

Anonymous said...

hi!!!
It has a nice tempo; can very well be used in school books
jai karunaaDu
:-)
malathi S

Manasa said...

Raghu,

Tumbaa tumbaa karunaadin sobagu mattu siriyannu varnisiddiree... good one :)

H S ASHOK KUMAR said...

ನಮಸ್ಕಾರ ರಘು ಅವರಿಗೆ
ನನ್ನ ಬ್ಲಾಗ್ ಗೆ ಸ್ವಾಗತ

ನಾಡಿದು... ಕರುನಾಡಿದು...

ನಾಡು, ನುಡಿ ಬಗ್ಗೆ ತಮಗೆ ಇರೋ
ಕಾಳಜಿ ಸುಂದರವಾಗಿ ಮೂಡಿ ಬಂದಿದೆ

ಜೈ ಕರ್ನಾಟಕ

ಮನಸು said...

raghu tumba chennagide kavanada saalugalu naaDina bagge enta olavu nimmalli kanndada siriyannu chennagi tiLisiddeeri