ಮನದ ಭುವಿಗೆ ಬಿತ್ತು ಪ್ರೀತಿ ಮಂಜು
ಮುತ್ತಿನ ಮಂಜು ನನ್ನೆದೆ ಸೇರಿತು,
ನನ್ನೊಳಗೆ ನನಗೆ ಆಸರೆ ಆಯಿತು,
ಇದು ನನ್ನ ಕನಸೋ, ಅಲ್ಲ,
ಇದು ಯಾರ ನನಸೋ, ಅರಿಯೆ ನಾನು..
ನೆನದ ಹೃದಯ ಮೌನ ಬಿಟ್ಟು ಮಾತಾಡಿದೆ..
ನನಗೆ ನೀನೇ ಉಸಿರು, ನನಗೆ ನೀನೇ ಹಸಿರು
ನನಗೆ ನೀನೇ ಬೆಳಕು, ನನಗೆ ನೀನೇ..ಬದುಕು..
ಅಂದು ಗಿಡವಾಗಿದ್ದ ಕನಸು
ಇಂದು ನನ್ನೇ ಕಾಯುವ ಹೆಮ್ಮರವಾಗಿದೆ,
ದಣಿದ ಮನಕೆ ಒಲವ ನೆರಳಾಗಿದೆ,
ಕೈ ಚಾಚಿ ತನ್ನೆಡೆಗೆ ಬಾ ಎಂದಿದೆ,
ನೆನಪು ಕಡಲು, ನಗುವು ಹೊನಲು,
ಇದು ನನ್ನ ಕನಸೋ, ಅಲ್ಲ,
ಇದು ಯಾರ ನನಸೋ, ಅರಿಯೆ ನಾನು
ನೆನದ ಹೃದಯ ಮೌನ ಬಿಟ್ಟು ಮಾತಾಡಿದೆ..
ನನಗೆ ನೀನೆ ಉಸಿರು, ನನಗೆ ನೀನೆ ಹಸಿರು
ನನಗೆ ನೀನೆ ಬೆಳಕು, ನನಗೆ ನೀನೆ.. ಬದುಕು..
ಬಾನ ಕಣ್ಣ ತುಂಬಾ ನೆನಪ
ಕರಿಮೋಡ.. ಹರಿದಾಡಿದೆ..
ಕರಗಿ ಧರೆಗೆ ಬರುವ ಸುಳಿವು
ಮೊದಲ ಹನಿ ನೀಡಿದೆ..
ಸಮಯ ನನ್ನ ಕಾಯುತ್ತಿಲ್ಲ..ಮನಸು ನನ್ನ ಕೇಳುತ್ತಿಲ್ಲ..
ಇದು ನನ್ನ ಕನಸೋ, ಅಲ್ಲ,
ಇದು ಯಾರ ನನಸೋ, ಅರಿಯೆ ನಾನು
ನೆನದ ಹೃದಯ ಮೌನ ಬಿಟ್ಟು ಮಾತಾಡಿದೆ..
ನನಗೆ ನೀನೇ ಉಸಿರು, ನನಗೆ ನೀನೇ ಹಸಿರು
ನನಗೆ ನೀನೇ ಬೆಳಕು, ನನಗೆ ನೀನೇ..ಬದುಕು..
ನಿಮ್ಮವ,
ರಾಘು.
28 comments:
'ಉಸಿರಲ್ಲಿ ಉಸಿರಾದ ಪ್ರೀತಿ ದೇಹದ ಕಣ ಕಣದಲ್ಲೂ ಸೇರಿ ಜೀವವೆಲ್ಲಾ ಪ್ರೀತಿಯಾಗುವ ಪರಿ'ನಿಮ್ಮಕವನದಲ್ಲಿ ಸುಂದರವಾಗಿ
ಮೂಡಿ ಬಂದಿದೆ.
ನೆನೆದ ಹೃದಯ ಮೌನ ಬಿಟ್ಟು ಮಾತಾಡಿದ ರೀತಿ ಸುಂದರವಾಗಿದೆ.
ಒಳ್ಳೆಯ ಕವನ.
ಓಹ್ !ತುಂಬಾ ಚೆನ್ನಾಗಿದೆ
ರಾಘು,
ಪ್ರೀತಿ ಬೆಳೆಯುವ ಪರಿ, ನೆರಳಾಗುವ ಪರಿ ಹಾಗೂ ಪ್ರೀತಿಯೇ ಸಕಲ ಸರ್ವಸ್ವವಾಗುವ ಪರಿಯನ್ನು ತುಂಬ ಚೆನ್ನಾಗಿ ಕವನಿಸಿದ್ದೀರಿ. ಅಭಿನಂದನೆಗಳು.
ಪ್ರೀತಿ ಮರವಾಗಿ, ಮನಕೆ ನೆರಳಾಗಿ, ಬದುಕಿಗೆ ಸಂಜೀವಿನಿಯಾದ ಸುಂದರ ಕಲ್ಪನೆಯನ್ನು ಚಂದದ ಕವನದಲ್ಲಿ ನಿರೂಪಿಸಿದ ರೀತಿ ತುಂಬಾ ಚೆನ್ನಾಗಿದೆ.
ಉತ್ತಮ ಕವನ.
raghu......
tumbaa sundara kavana.... music keLuttaa bareyutteeraa hege...... tumbaa chennaagide........
naanoo hosadaagi barediddene banni.......
ಸೊಗಸಾದ ಕವನ...
ಚೆನ್ನಾಗಿದೆ..:)ಅಭಿನಂದನೆಗಳು
you write so well Raaghu!!
write more and more
:-)
malathi S
Good Effort, keep writing!
bahala sundaravada kavana. http://gadhyapadhya.blogspot.com/
Kavana OK aagide...
superb sir
Hi Raghu,
kanaso.. nanaso.. manaso.. usiro...
mast one
ನೆನದ ಹೃದಯ ಮೌನ ಬಿಟ್ಟು ಮಾತಾಡಿದೆ..
ನನಗೆ ನೀನೇ ಉಸಿರು, ನನಗೆ ನೀನೇ ಹಸಿರು
ನನಗೆ ನೀನೇ ಬೆಳಕು, ನನಗೆ ನೀನೇ..ಬದುಕು..
last line super..
NIce :)
ಪ್ರೀತಿ ಅಂದ್ರೆ ಏನೇನೆಲ್ಲಾ ಅಲ್ವ ..
ತುಂಬಾ ಚೆನ್ನಾಗಿದೆ ಕವನ ...
ರಾಘು...ಹಲವು ಭಾವನೆಗಳಿಗೆ ಗರಿಕೊಟ್ಟು ಹಾರಲು ಬಿಟ್ಟಿದ್ದೀರಿ...
ಅದರಲ್ಲೂ ನೆನಪು ಕರಿಮೋಡವಾಗಿ ಧರೆಗೆ ಬರುವ ಸುಳಿವನ್ನು ಮೊದಲ ಹನಿಮೂಲಕ ತಂದದ್ದು..
ಬಾನ ಕಣ್ಣ ತುಂಬಾ ನೆನಪ
ಕರಿಮೋಡ.. ಹರಿದಾಡಿದೆ..
ಕರಗಿ ಧರೆಗೆ ಬರುವ ಸುಳಿವು
ಮೊದಲ ಹನಿ ನೀಡಿದೆ..
ಸಮಯ ನನ್ನ ಕಾಯುತ್ತಿಲ್ಲ..ಮನಸು ನನ್ನ ಕೇಳುತ್ತಿಲ್ಲ..
ಡಾ.ಕೃಷ್ಣಮೂರ್ತಿ.ಡಿ.ಟಿ. ಅವರೇ,
ಉಸಿರು ನಮಗೆ ಪ್ರೀತಿ
ಜೀವನ ನಮಗೆ ಪ್ರೀತಿ
ನಾವು ಬದುಕುತ್ತ ಇರೋದು ಒಂದಲ್ಲ ಒಂದು ರೀತಿಯ ಪ್ರೀತಿ ಇಂದಲೇ.
ಮನದಾಳದಿಂದ ಮತ್ತು ನಾಗಶ್ರೀ ಅವರೇ,
ತುಂಬಾ ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ.
ಸುನಾಥ್ ಅವರೇ,
ಪ್ರೀತಿಯೇ ನನ್ನುಸಿರು..ನನ್ನ ಮನಸ್ಸಿಗೆ ತೋಚಿದ್ದನ್ನು ನನ್ನದೇ ಆದ ರೀತಿಯಲ್ಲಿ ಕವನಿಸೋದು ತುಂಬಾ ಇಷ್ಟ.
ನಿಮ್ಮ ಅಭಿನಂದನೆಗೆ ನನ್ನ ಧನ್ಯವಾದಗಳು.
ನಿಮ್ಮವ,
ರಾಘು.
ಚೇತನಾ ಭಟ್ ಅವರೇ,
ಪ್ರೀತಿಯ ನೆರಳು ಬದುಕಿಗೆ ಸಂಜೀವಿನಿ. ಕವನ ನಿಮಗೆ ಇಷ್ಟವಾಗಿದ್ದು ನನಗೆ ಖುಷಿ ಆಯಿತು.
ಸುಬ್ರಹ್ಮಣ್ಯ ಅವರೇ.. ಪ್ರತಿಕ್ರಿಯೆಗೆ ಧನ್ಯವಾದಗಳು.
ನಿಮ್ಮವ,
ರಾಘು.
ದಿನಕರ ಅವರೇ,
ಮ್ಯೂಸಿಕ್ ಕೇಳುತ್ತ ಬರಿಯೋಲ್ಲ. ನನ್ನದೇ ಆದ ಶೈಲಿನಲ್ಲಿ, ನನ್ನದೇ ಆದ ರಾಗಕ್ಕೆ ಸರಿಯಾಗಿ ಬರಿಯೋದು ನನಗೆ ತುಂಬಾ ಇಷ್ಟ.
ಧನ್ಯವಾಗಳು.
ಮಹೇಶಣ್ಣ,
ಧನ್ಯವಾಗಳು.ನಿಮ್ಮ ಹೊಸ ಚುಟುಕ ಸೂಪರ್.
ಮಾಲತಿ ಅವರೇ,
ಧನ್ಯವಾಗಳು. ಹೊಸ ಹೊಸ ರಾಗ ಸಿಕ್ಕಸ್ಟು ಹೊಸ ಹೊಸ ಕವನ.
ವಿ.ಆರ್.ಭಟ್ ಅವರೇ,
ಧನ್ಯವಾಗಳು. ನಾನು ಬರಿತಲೇ ಇರ್ತೀನಿ ನೀವು ಬರುತ್ತಲೇ ಇರಿ.
ನಿಮ್ಮವ,
ರಾಘು.
Creativity , ರವಿಕಾಂತ ಗೋರೆ, ಗುರು ಅವರೇ,
ನಿಮ್ಮೆಲ್ಲರ ಪ್ರತಿಕ್ರಿಯೆಗೆ ಧನ್ಯವಾದಗಳು.
ನಿಮ್ಮವ,
ರಾಘು.
ಪ್ರವೀಣ್ ಭಟ್, ರಾಘು ಮಡಿವಾಳ, ರಂಜಿತ ಅವರೇ
ತುಂಬಾ ತುಂಬಾ ಧನ್ಯವಾದಗಳು.
ಆಜಾದ್ ಸರ್..
ಬಾವ ಹಕ್ಕಿ, ಅದು ಯಾವಾಗಲು ತನ್ನಿಸ್ತದಂತೆ ಹಾರಾಡುತ ಇರ್ಬೇಕು ಅಲ್ವ..
ನಿಮ್ಮವ,
ರಾಘು.
ರಘು..
ಭಾವಗಳು ಹೃದಯ ತುಂಬಿ ಹಾಡಿವೆ..
ನಿಮ್ಮ ಕವಿತೆಯಲ್ಲಿ...
ಅಭಿನಂದನೆಗಳು ಚಂದದ ಕವನಕ್ಕೆ...
tumba sundara kavana ..wonderful lines ..sorry for being late.
ಬಾನ ಕಣ್ಣ ತುಂಬಾ ನೆನಪ
ಕರಿಮೋಡ.. ಹರಿದಾಡಿದೆ..
ಕರಗಿ ಧರೆಗೆ ಬರುವ ಸುಳಿವು
ಮೊದಲ ಹನಿ ನೀಡಿದೆ..
ಸಮಯ ನನ್ನ ಕಾಯುತ್ತಿಲ್ಲ..ಮನಸು ನನ್ನ ಕೇಳುತ್ತಿಲ್ಲ..
e salugalu thumba channagide.
HONNAHNI
honnani.blogspot.com
ಭಾವ ಪೂರ್ಣ ಸು೦ದರ ಕವನ.
ನನ್ನ ಬ್ಲಾಗ್ ಗೊಮ್ಮೆ ಭೇಟಿ ನೀಡಿ.
ನಿಮ್ಮ ಕವನದಲ್ಲಿ ನನಗಿಷ್ಟವಾದ ಸಾಲುಗಳು
"ಅಂದು ಗಿಡವಾಗಿದ್ದ ಕನಸು
ಇಂದು ನನ್ನೇ ಕಾಯುವ ಹೆಮ್ಮರವಾಗಿದೆ,
ದಣಿದ ಮನಕೆ ಒಲವ ನೆರಳಾಗಿದೆ,
ಕೈ ಚಾಚಿ ತನ್ನೆಡೆಗೆ ಬಾ ಎಂದಿದೆ.."
ಬರೆಯುತ್ತಿರಿ..ರಾಘು..
ಅನ೦ತ್
ತುಂಬಾ ಅದ್ಭುತ ಕಲ್ಪನೆ ನನಗಂತೂ ತುಂಬಾ ಇಷ್ಟವಾಯಿತು ಧನ್ಯವಾದಗಳು ರಾಘುರವರೆ.
ವಸಂತ್
Post a Comment